ಕೊಣಾಲು ಆರ್ಲ: ರೈತ ಮಹಿಳೆಯರಿಗೆ ಮಾಹಿತಿ ಶಿಬಿರ

ಶೇರ್ ಮಾಡಿ

ಉತ್ತಮ ಆರೋಗ್ಯದೊಂದಿಗೆ, ಸ್ವಉದ್ಯೋಗ ಮಾಡುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕಬೇಕು       – ಶ್ರೀಮತಿ ಉಷಾ ಅಂಚನ್, ಅಧ್ಯಕ್ಷರು ಕೊಣಾಲು ಹಾ.ಉ.ಮ.ಸ.ಸ

ನೇಸರ ಮಾ.28: ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು(KMF), ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ನಿ, ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿ ಇದರ ಜಂಟಿ ಆಶ್ರಯದಲ್ಲಿ ಮಾ.28ರಂದು ಸಂಘದ ಆವರಣದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ – ಸಂಜೀವಿನಿ 2021-22 ನೇ ಸಾಲಿನ ಯೋಜನೆಯಡಿ ಮಹಿಳಾ ಮತ್ತು ಆರೋಗ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಉಷಾ ಅಂಚನ್, ಅಧ್ಯಕ್ಷರು ಕೊಣಾಲು ಹಾ.ಉ.ಮ.ಸ.ಸ ಇವರು ವಹಿಸಿ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿ, ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಬೇಕು, ಉತ್ತಮ ಆರೋಗ್ಯದೊಂದಿಗೆ ಸ್ವಉದ್ಯೋಗ ಮಾಡುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಕರೆ ನೀಡಿದರು ಹಾಗೂ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಡಾ.ಸತೀಶ್ ರಾವ್, ಉಪ ವ್ಯವಸ್ಥಾಪಕರು ದ.ಕ.ಹಾ.ಒಕ್ಕೂಟ ನಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು, ಸಂಪನ್ಮೂಲ ವ್ಯಕ್ತಿ ಡಾ.ಶಿಶಿರ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವರು ಮಹಿಳೆಯರ ಆರೋಗ್ಯದ ಬಗ್ಗೆ ಇರಬೇಕಾದ ಕಾಳಜಿ, ವಯಸ್ಸಿಗೆ ಅನುಗುಣವಾಗಿ ಹೆಣ್ಣು ಮಕ್ಕಳಲ್ಲಿ ಆಗುವ ಬದಲಾವಣೆ ಹಾಗೂ ಕಾಯಿಲೆಗಳ ಬಗ್ಗೆ ಪ್ರಾಜೆಕ್ಟರ್ ಗಳ ಮೂಲಕ ವಿವರವಾಗಿ ಮಾಹಿತಿ ನೀಡಿದರು. ಲಾಭದಾಯಕವಾಗಿ ದನ ಸಾಕಾಣಿಕೆ, ಶುದ್ಧ ಹಾಲು ಉತ್ಪಾದನೆ ಮೊದಲಾದವುಗಳ ಬಗ್ಗೆ ವಿಸ್ತಾರವಾಗಿ ಸಂಪನ್ಮೂಲ ವ್ಯಕ್ತಿ ಯಮುನಾ ವಿಸ್ತರಣಾಧಿಕಾರಿಗಳು ದ.ಕ.ಹಾ.ಒಕ್ಕೂಟ ನಿ ತಿಳಿಸಿಕೊಟ್ಟರು. ಹಸಿರು ಮೇವು ಬೆಳವಣಿಗೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ರುತಿ ಟಿ ಕೆ ಉಪ ವ್ಯವಸ್ಥಾಪಕರು ದ.ಕ.ಹಾ ಒಕ್ಕೂಟ ನಿ ಮಾಹಿತಿ ನೀಡಿದರು.
ರೈತ ಮಹಿಳೆಯರ ಸಬಲೀಕರಣಕ್ಕಾಗಿ ಹೈನುಗಾರಿಕೆ ಮಾಡಲು “ಮಾರ್ಜಿನ್ ಮನಿ” ಎಂಬ ಹೆಸರಿನಲ್ಲಿ ಮಹಿಳಾ ಸಂಘಕ್ಕೆ ಎರಡೂವರೆ ಲಕ್ಷವನ್ನು ನೀಡಲಾಗುವುದು, ಆಸಕ್ತ ಮಹಿಳೆಯರು ತಲಾ 25 ಸಾವಿರದಂತೆ ಬಡ್ಡಿ ರಹಿತ ಹಣವನ್ನು ಪಡೆದು ಹೈನುಗಾರಿಕೆಯನ್ನು ನಡೆಸಬಹುದು ಎಂಬುದಾಗಿ ತಿಳಿಸಿದರು.

ಸನ್ಮಾನ:
ಮಹಿಳಾ ಮತ್ತು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ ಡಾ.ಶಿಶಿರ ವೈದ್ಯಾಧಿಕಾರಿಗಳು ಪ್ರಾರ್ಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವರನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಲೈಲಾ ಹಾಗೂ ಸಂಘದ ನಿರ್ದೇಶಕರುಗಳು, ಒಕ್ಕೂಟದ ಮಹಿಳೆಯರು ಉಪಸ್ಥಿತರಿದ್ದರು. ಶ್ರೀಮತಿ ಉಷಾ ಅಂಚನ್ ಸ್ವಾಗತಿಸಿದರು, ಉಪಾಧ್ಯಕ್ಷೆ ಗಾಯತ್ರಿದೇವಿ ಧನ್ಯವಾದ ಸಮರ್ಪಿಸಿದರು, ನಳಿನಿ, ಸ್ಟೆಪ್ ವಿಭಾಗದ NGO ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ

Leave a Reply

error: Content is protected !!