ನೇಸರ ಮಾ.30: ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಬೇಸಿಗೆ ಶಿಬಿರವು ಮಾ.30 ರಿಂದ ಎ.1 ರವರೆಗೆ ಮೂರು ದಿನ ನಡೆಯಲಿದೆ.
ಮಾ.30 ರಂದು ಬೇಸಿಗೆ ಶಿಬಿರವನ್ನು ಕೊಕ್ಕಡದ ಪಂಚಮಿ ಹಿತಾಯುರ್ಧಾಮ ಆಸ್ಪತ್ರೆಯ ಡಾ.ಬಿ.ಮೋಹನದಾಸ್ ಗೌಡ ಇವರು ದೀಪಬೆಳಗಿಸಿ ಉದ್ಘಾಟಿಸಿ, ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಮಾದಕ ವ್ಯಸನದತ್ತ ಮುಖ ಮಾಡದೆ ಸೃಜನಶೀಲ ಕೆಲಸಗಳೆಡೆಗೆ ಗಮನಹರಿಸಬೇಕು. ಈ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸುತ್ತಿದೆ. ಸಂಸ್ಕಾರವಂತರು ಸದಾ ಸದ್ವಿಚಾರ ಶೀಲವಂತರಾಗಿರುತ್ತಾರೆ. ಬೇಸಿಗೆ ಶಿಬಿರ ನಿಮ್ಮಲ್ಲಿ ನವಚೈತನ್ಯ ಮೂಡಿಸುತ್ತದೆ. ಇಲ್ಲಿ ಕಲಿತ ವಿಚಾರವನ್ನು ಇತರರಿಗೂ ಹಂಚಿ. ಸದಾ ಕ್ರಿಯಾಶೀಲರಾಗಿ ಎಂದು ನುಡಿದರು. ಶಾಲೆಯು ಮದುವಣಗಿತ್ತಿಯಂತೆ ಸಿಂಗಾರಗೊಂಡು ವಿದ್ಯಾರ್ಥಿಗಳನ್ನು ಬೇಸಿಗೆ ಶಿಬಿರಕ್ಕೆ ಕೈ ಬೀಸಿ ಕರೆಯುತ್ತಿತ್ತು.
ಕರಕುಶಲ ಕಲೆ, ಕಂಪ್ಯೂಟರ್, ರಂಗಗೀತೆ, ನೃತ್ಯ, ಪ್ರಾಣಾಯಾಮ, ತೆಂಗಿನಗರಿಯ ವಿವಿಧ ಚಟುವಟಿಕೆ, ಅಡುಗೆ, ಹಳೆಯ ಬಟ್ಟೆ ಬಳಸಿ ಮೋಬ್ ತಯಾರಿ, ಸೀಡ್ ಬಾಂಬ್ ಹೀಗೆ ಅನೇಕ ಚಟುವಟಿಕೆಗಳನ್ನು ಮೂರು ದಿನಗಳಲ್ಲಿ ಆಯೋಜಿಸಲಾಗಿದ್ದು ಶಾಲೆಯಲ್ಲಿ ಹಬ್ಬದ ವಾತಾವರಣ ತುಂಬಿ ತುಳುಕುತ್ತಿತ್ತು.
ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ.ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮ ಕು.ಬೃಹತಿ ಹಾಗೂ ವೈಷ್ಣವಿಯವರ ಪ್ರಾಥನೆಯೊಂದಿಗೆ ಪ್ರಾರಂಭವಾಗಿ, ಆಶಾ ಕುಮಾರಿ ಪಿ.ಕಾರ್ಯಕ್ರಮ ನಿರೂಪಿಸಿದರು.
—ಜಾಹೀರಾತು—