
ನೇಸರ ಮಾ.30: ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ.ವಸಂತ ಬಂಗೇರರವರು ಇಂದು (ಮಾ.30) ತನ್ನ ಶಾಸಕತ್ವದ ಅವಧಿಯಲ್ಲಿ ಅನುದಾನ ಮಂಜೂರುಗೊಂಡು ನಿರ್ಮಾಣವಾಗಿದ್ದ ಕೊಕ್ಕಡ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಜೊತೆಗೆ ಸಮಾಲೋಚಿಸಿ ಆಸ್ಪತ್ರೆಯ ಖಾಲಿ ಹುದ್ದೆಗಳ ಮಾಹಿತಿ, ಹೆರಿಗೆ ತಜ್ಞರ ಅಗತ್ಯತೆ, ರಾತ್ರಿ ಕಾವಲುಗಾರರ ಅಗತ್ಯತೆ ಇತ್ಯಾದಿ ಮಾಹಿತಿಗಳನ್ನು ಪಡೆದುಕೊಂಡರು.

ಈ ಸಂದರ್ಭ ಮುಖಂಡರಾದ ವ್ಯಾಸ್ ಭಟ್ ಶಿಶಿಲ, ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಹಕೀಂ ಕೊಕ್ಕಡ, ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಎಸ್, ಪ್ರಮುಖರಾದ ಗಣೇಶ್ ಕಾಶಿ, ಗುರುದೇವನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.