ನೇಸರ ಎ.09: ಬಾರತೀಯ ಹೋಮಿಯೋಪಥಿ ವೈದ್ಯರ ಸಂಘ ಕರ್ನಾಟಕ ಹಾಗೂ ಮಂಗಳೂರು ಘಟಕದ ವತಿಯಿಂದ ಏ. 10ರಂದು ಅಪರಾಹ್ನ 2:15 ಗಂಟೆಗೆ ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆರ್. ಎ. ಪಿ. ಸಿ. ಸಿ ಕಾನ್ಫರೆನ್ಸ್ ಹಾಲ್ ನಲ್ಲಿ ಹೋಮಿಯೋಪಥಿ ವೈದ್ಯಕೀಯ ಜನಕ ಸ್ಯಾಮುಯೆಲ್ ಹ್ಯಾನಿಮನ್ ಜನ್ಮದ ಅಂಗವಾಗಿ ವಿಶ್ವ ಹೋಮಿಯೋಪಥಿ ದಿನಾಚರಣೆ ಹಾಗೂ ಹೋಮಿಯೋಪಥಿ ವೈದ್ಯರ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಅವರು ಭಾಗವಹಿಸಲಿದ್ದು. ದ.ಕ. ಜಿಲ್ಲೆಯ ಖ್ಯಾತ ಹೋಮಿಯೋಪಥಿ ತಜ್ಞ ವೈದ್ಯರುಗಳಾದ ಡಾ|ರಾಮಕೃಷ್ಣ ರಾವ್, ಡಾ|ಅನಿಶ್ ಕುಮಾರ್ ಹಾಗೂ ಡಾ|ದೀಪಕ್ ಆರ್.ಡಿ ರವರು ಉಪನ್ಯಾಸ ನೀಡಲಿದ್ದಾರೆ.
ಸನ್ಮಾನ
ಹೋಮಿಯೋಪಥಿ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸಾಧನೆಗಾಗಿ ಮಂಗಳೂರಿನ ಪ್ರಸಿದ್ಧ ವೈದ್ಯ ಹಾಗೂ ಹೋಮಿಯೋಪಥಿ ಔಷಧ ತಯಾರಕ ಘಟಕದ ಹೋಮಿಯೋಪಥಿ ಸಂಸ್ಥೆಯ ರೂವಾರಿಗಳಾದ ಡಾ|ಅಬ್ರಹಾಂ ಜಾಕರಿಯಾಸ್ ದಂಪತಿಯನ್ನು ವೈದ್ಯರ ಸಂಘದ ಪರವಾಗಿ ಸನ್ಮಾನಿಸಲಾಗುವುದು.
ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಹೋಮಿಯೋಪತಿ ವೈದ್ಯರು ಅಲ್ಲದೆ ವೈದ್ಯಕೀಯ ವಿದ್ಯಾರ್ಥಿಗಳು ಈ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.|ಪ್ರವೀಣ್ ಕುಮಾರ್ ರೈ. ಮಂಗಳೂರು ಘಟಕದ ಅಧ್ಯಕ್ಷ ಡಾ|ಅವಿನಾಶ್ ವಿ ಎಸ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿಶ್ವ ಹೋಮಿಯೋಪಥಿ ದಿನಕ್ಕೆ ಶುಭಕೋರುವ ಜ್ಯೋತಿರ್ವೈದ್ಯ ಹೋಮಿಯೋ ಕ್ಲಿನಿಕ್ ಡಾ. ಅನೀಶ್ ಕುಮಾರ್ ಸಾದಂಗಾಯ BHMS, MD(hom). ಶ್ರೀನಿಧಿ ಕಾಂಪ್ಲೆಕ್ಸ್ , ನೆಲ್ಯಾಡಿ. ಜ್ಯೋತಿರ್ನಿಲಯ ಬಪ್ಪಳಿಗೆ ಪುತ್ತೂರು(ಸೋಮವಾರ ಮತ್ತು ಗುರುವಾರ ಮಾತ್ರ) PH- 9900224260 |