ನೇಸರ ಎ.18: ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಹೊಸಮಠ -ಬಲ್ಯ ಇದರ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ ಎ.17ರ ಆದಿತ್ಯವಾರ ದಂದು ಹಿಂದೂ ಬಾಂಧವರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನಾ ಸಮಾರಂಭ ಬೆಳಿಗ್ಗೆ 9.00ಕ್ಕೆ ನಡೆಯಿತು.
ಸಮಾರಂಭವನ್ನು ಮೋಹನ್ ಕೆರೆಕೋಡಿ, ಅಧ್ಯಕ್ಷರು ಗ್ರಾಮ ಪಂಚಾಯತ್ ಕುಟ್ರುಪ್ಪಾಡಿ, ಉದ್ಘಾಟಿಸಿದರು ಇಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಅನಿವಾರ್ಯವಾಗಿದೆ ನಮ್ಮ ಮಕ್ಕಳ ವಿದ್ಯಾರ್ಥಿ ಜೀವನ ಓದಿಗೆ ಸೀಮಿತವಾಗಿದೆ. ನೈಸರ್ಗಿಕವಾಗಿ ಸಿಗಬೇಕಾದ ಸೂರ್ಯನ ಬೆಳಕಿನ ವಿಟಮಿನ್ ಗಳ ಕೊರತೆಯಿಂದ ಮತ್ತು ಮಕ್ಕಳು ದೈಹಿಕ ವ್ಯಾಯಾಮಗಳಿಲ್ಲದೆ ಬಳಲುತ್ತಿದ್ದಾರೆ. ಓದಿಗೆ ಸೀಮಿತವಾಗುತ್ತಿದೆ ಬದುಕು. ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮಕ್ಕಳನ್ನು ಕ್ರಿಯಾಶೀಲ ಗೊಳಿಸಿ ಆಕರ್ಷಿತರಾಗುವಂತೆ ಮಾಡುವ ಅನಿವಾರ್ಯತೆ ಇದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಬೆಳ್ಳಿಹಬ್ಬದ ಸಮಿತಿಯ ಅಧ್ಯಕ್ಷರು ಶ್ರೀಯುತ ನಾರಾಯಣ, ಯನ್, ಬಲ್ಯ, ಕೊಲ್ಲಿಮಾರು ವಹಿಸಿದ್ದರು ಬೆಳ್ಳಿಹಬ್ಬದ ನೆನಪಿನ ಈ ಕ್ರೀಡಾ ಉತ್ಸವ ಕೊರೋನ ಕಾರಣದಿಂದ ತಡವಾಗಿ ನಡೆಯುತಿದೆ. ಮೇ 1ರಂದು ಗಣ್ಯರ ಉಪಸ್ಥಿತಿಯಲ್ಲಿ ಕ್ರೀಡಾಹಬ್ಬದ ಸಮಾರೋಪ ಸಮಾರಂಭ, ರಂಗಮಂದಿರ ಲೋಕಾರ್ಪಣೆ, ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ, ಬಹುಮಾನ ವಿತರಣೆ ನಡೆಯಲಿದೆ ಮಾನ್ಯ ಸಚಿವ ಎಸ್.ಅಂಗಾರ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ದೇಜಯ್ಯ ದೇವಾಡಿಗ ಗಾಣದ ಕೊಟ್ಟಿಗೆ, ವೆಂಕಟರಮಣ ಗೌಡ ದೇರಾಜೆ, ಶೇಖರಗೌಡ ದೇರಾಜೆ, ಉಮೇಶ್ ಬಂಗೇರ ಮಾದೇರಿಕೆ, ಚಂದ್ರಶೇಖರಗೌಡ ಪಾತ್ರಜೆ, ಬಿ.ಎಮ್ ಪೂರ್ಣೇಶ್ ಗೌಡ ಬಾಬ್ಲು ಬೆಟ್ಟು, ಕೃಷ್ಣ ಎಮ್.ಆರ್ ಹೊಸಮಠ ಉಪಸ್ಥಿತರಿದ್ದರು. ಮೋಹನ್ ಸ್ವಾಗತಿಸಿ, ಪೂರ್ಣೇಶ್ ಧನ್ಯವಾದ ಸಮರ್ಪಿಸಿ, ಶೇಖರ್ ಗೌಡ ಪನ್ಯಾಡಿ ನಿರೂಪಿಸಿದರು.