ನೇಸರ ಎ.19: ಪಂಚಾಯತ್ ರಾಜ್ ಇಲಾಖೆ, ದ ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಅಮೃತ ಗ್ರಾಮ ಪಂಚಾಯತ್ ಕೊಕ್ಕಡ ಇದರ ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಕಸಮುಕ್ತ ಗ್ರಾಮ ನಮ್ಮ ಸಂಕಲ್ಪ ದಡಿಯಲ್ಲಿ ಸಂಜೀವಿನಿ ಸ್ವಸಹಾಯ ಸಂಘ ಕೊಕ್ಕಡ, ಶಕ್ತಿ ಆಟೋ ಚಾಲಕ ಮಾಲಕರ ಸಂಘ ಕೊಕ್ಕಡ, ಜೇಸಿಐ ಕಪಿಲ ಕೊಕ್ಕಡ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪುತ್ಯೆ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ “ಬಯಲು ಕಸ ಮುಕ್ತ ಗ್ರಾಮ ಅಭಿಯಾನ 2022” ಇದರ ಅಂಗವಾಗಿ ಎರಡನೇ ಹಂತದ ಕಾರ್ಯಕ್ರಮ ಇಂದು(ಎ.19ರ) ಬೆಳಗ್ಗೆ ಪುತ್ಯೆಗೆ ತೆರಳುವ ಅಶ್ವತ್ಥಕಟ್ಟೆಯ ಬಳಿಯಿಂದ ಪುತ್ಯೆ ವರೆಗೆ ಸ್ವಚ್ಛತೆ ಹಾಗೂ ಜಾಗೃತ ಕಾರ್ಯಕ್ರಮವನ್ನು ನಡೆಸಲಾಯಿತು.
ಕೊಕ್ಕಡ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಯೋಗೀಶ ಅಲಂಬಿಲ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್. ನೋಡಲ್ ಅಧಿಕಾರಿ ಡಾ.ಜಯಕೀರ್ತಿ ಜೈನ್, ಕೊಕ್ಕಡ ಗ್ರಾಮ ಪಂಚಾಯತ್ ನ ಬಯಲು ಕಸಮುಕ್ತ ಗ್ರಾಮ ಅಭಿಯಾನ 2022 ರ ರಾಯಭಾರಿ ನಿವೃತ್ತ ಮುಖ್ಯೋಪಾಧ್ಯಾಯ ಜೇಸಿ.ಎಚ್ ಜಿ ಎಫ್.ಜೋಸೆಫ್ ಪಿರೇರಾ, ಜೇಸಿಐ ಕೊಕ್ಕಡ ಕಪಿಲದ ಅಧ್ಯಕ್ಷರಾದ ಜೇಸಿ.ಶ್ರೀಧರ ರಾವ್.ಕೆ, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಪವಿತ್ರ, ಸದಸ್ಯರುಗಳಾದ ಪ್ರಭಾಕರ ಗೌಡ, ಜಗದೀಶ ಕೆಂಪಕೋಡಿ, ವಿಶ್ವನಾಥ ಕುಕ್ಕುದೊಳಿ, ಪುರುಷೋತ್ತಮ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಶ್ರೀಮತಿ ವೀಣಾ, ಪದಾಧಿಕಾರಿಗಳು, ಜಯರಾಮ ಗೌಡ ಹಾರ, ವಿನಯ ಹಾರ, ಕಿಶೋರ್ ಪುತ್ಯೆ, ಗ್ರಾ.ಪಂ.ಸಿಬ್ಬಂದಿಗಳು ಮೊದಲಾದವರು ಸಹಕರಿಸಿದರು.
ಕಸವನ್ನು ಹೆಕ್ಕುವುದರ ಮೂಲಕ ಅಭಿಯಾನ ಮಾಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಸಮರ್ಪಿಸಿದರು.
—ಜಾಹೀರಾತು—