ನೇಸರ ಮೇ 18: ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಶಿರ್ಲಾಲು ಇಲ್ಲಿಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾರಂಭ ಮಕ್ಕಳಿಗೆ ನೋಟುಪುಸ್ತಕ, ಪೆನ್ನು, ಪೆನ್ಸಿಲ್, ಸಿಹಿ ತಿಂಡಿ ಹಾಗೂ ಸಿಹಿ ಊಟವನ್ನು ಗಣ್ಯರಿಂದ ವಿತರಿಸುವ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು.
ಶಾಲೆಯನ್ನು ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಟ್ಟು ಸೇರಿ ರಂಗೋಲಿ, ತಳಿರುತೋರಣಗಳಿಂದ ಸಿಂಗಾರಿಸಲಾಯಿತು. ಶಾಲೆಗೆ ಹೊಸದಾಗಿ ದಾಖಲುಗೊಂಡ ಮಕ್ಕಳನ್ನು ಗಣ್ಯರು ಹೂ ಗುಚ್ಚ ನೀಡಿ ಸ್ವಾಗತಿಸಿ, ಶಾಲೆಯಲ್ಲಿ ಈಗಾಗಲೇ ಇರುವ ನಕ್ಷತ್ರ ಪುಂಜಗಳ ಜೊತೆಗೆ ಹೊಸ ನಕ್ಷತ್ರಗಳನ್ನು ಮಕ್ಕಳ ಕೈಯಿಂದಲೇ ಸ್ಟಾರ್ ಗಳನ್ನು ಅಂಟಿಸುವ ಮೂಲಕ ಸಮ್ಮಿಲನಗೊಳಿಸಲಾಯಿತು.
ಸಮಾರಂಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ತಾರಾನಾಥ ಗೌಡ, ಸದಸ್ಯರಾದ ಮಾದವ ಕುಲಾಲ್, ಕೊರಗಪ್ಪ, ಶ್ರೀಮತಿ ಜ್ಯೋತಿ, ಶ್ರೀಮತಿ ಮಮತ ಜೈನ್, SDMC ಅಧ್ಯಕ್ಷ ಅಶೋಕ್ ಕುಲಾಲ್, ಶ್ರೀಮತಿ ಶಶಿಕಲಾ, ನಾಮ ನಿರ್ದೇಶಿತ ಸದಸ್ಯರಾದ ಸೋಮನಾಥ ಬಂಗೇರ ಮತ್ತು ಸರ್ವ ಸದಸ್ಯರು ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ, ಉಪಾಧ್ಯಕ್ಷ ಶಿವಾನಂದ, ಕೊಡುಗೈದಾನಿಗಳಾದ ಗುಣಮ್ಮ ಜೈನ್, ಹಳೆ ವಿದ್ಯಾರ್ಥಿಗಳಾದ ಶೀತಲ್ ಜೈನ್, ಹರ್ಷ ಜೈನ್, ಶ್ರೀರಾಮ ಫ್ರೆಂಡ್ಸ್ ಅಧ್ಯಕ್ಷ ಚೇತನ್, ಅರೋಗ್ಯ ಇಲಾಖೆಯ ಶ್ರೀಮತಿ ಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಶ್ರೀಮತಿ ಗೋಪಿ, ಛಾಯಾಗ್ರಾಹಕ ಸಂದೀಪ್, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ಪೋಷಕರು ಉಪಸ್ಥಿತರಿದ್ದರು.
🌼 ಜಾಹೀರಾತು 🌼