ನೇಸರ ಮೇ.25: ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ ಮೇ.20ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದ.ಕ.ಜಿಲ್ಲೆ, ಮಂಗಳೂರು ಸಂಸ್ಥೆಯ ಕೌನ್ಸಿಲರ್ ಕಂ ಟ್ರೈನರ್ ಶ್ರೀಮತಿ ಮಂಜೂಷ ರವರು ಕಾಲೇಜಿನ ವಿದ್ಯಾರ್ಥಿಗಳಿಗೆ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಡಿ ತರಬೇತು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನೋಂದಣಿ ಮಾಡಿಸುವುದರ ಮೂಲಕ ಉದ್ಯೋಗ ಕಾರ್ಡ್ ನೀಡಿ ವಿದ್ಯಾರ್ಥಿಗಳಿಗೆ ಅದರ ಉಪಯುಕ್ತತೆ ಹಾಗೂ ಬಳಸುವಿಕೆಯ ಕುರಿತಂತೆ ಮಾಹಿತಿ ನೀಡಿದರು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ, ಹೇಗೆ ಸಂದರ್ಶನ ಎದುರಿಸುವುದು ಎಂಬುದರ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡುವುದರೊಂದಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಯೋಜಕರಾದ ಡಾ. ಜಯರಾಜ್ ಎನ್, ಡಾ.ಸೀತಾರಾಮ ಪಿ, ಸಹ ಸಂಯೋಜಕರು ಇವರು ಸ್ವಾಗತಿಸಿದರು. ಡಾ.ನೂರಂದಪ್ಪ ಕನ್ನಡ ಉಪನ್ಯಾಸಕರು, ಸಂಚಾಲಕರು ಕಾಲೇಜಿನ ಯುವ ರೆಡ್ ಕ್ರಾಸ್ ಸಂಸ್ಥೆ, ಇವರು ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿರು ಉಪಸ್ಥಿತರಿದ್ದರು.
ಜಾಹೀರಾತು