ಕೆ ಎಸ್ ಎಸ್ ಕಾಲೇಜಿನಲ್ಲಿ ಉದ್ಯಮಶೀಲತೆ ಘಟಕದ ವತಿಯಿಂದ ಕರಕೌಶಲ ತರಬೇತಿ

ಶೇರ್ ಮಾಡಿ

ನೇಸರ ಮೇ‌.30: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ಉಣ್ಣೆಯ ದಾರದಿಂದ (ಉಲ್ಲನ್ ದಾರ) ವಿವಿಧ ರೀತಿಯ ಕರಕೌಶಲ್ಯದ ವಸ್ತುಗಳನ್ನು ತಯಾರಿಸುವ ತರಬೇತಿ ಕಾರ್ಯಕ್ರಮವನ್ನು ಮೇ‌.28ರಂದು ಉದ್ಯಮಶೀಲ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಯಿತು.

ಈ ತರಬೇತಿಯನ್ನು ಮಹಾವಿದ್ಯಾಲಯದ ಪ್ರಥಮ ಬಿ.ಕಾಂ ವಿದ್ಯಾರ್ಥಿ ಶರತ್.ಎಂ.ಆರ್. ಇವರು ನಡೆಸಿಕೊಟ್ಟರು. ಅದೇ ರೀತಿ ಕನ್ನಡ ಉಪನ್ಯಾಸಕಿ ಶ್ರೀಮತಿ ಸುಮಿತ್ರಾ ಹಾಗೂ ಉದ್ಯಮಶೀಲತೆ ಘಟಕದ ಸಂಯೋಜಕರಾದ ಡಾ.ನೀತು ಸೂರಜ್ ಮತ್ತು ಘಟಕದ ವಿದ್ಯಾರ್ಥಿ ನಾಯಕಿಯಾದ ಕಾವ್ಯಶ್ರೀ ಯು.ಜಿ. ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!