ನೇಸರ ಮೇ.31: ಲಯನ್ಸ್ ಕ್ಲಬ್ ದುರ್ಗಾಂಬಾ ಆಲಂಗಾರು, ಜೇಸಿಐ ಸಂಸ್ಥೆ ನೆಲ್ಯಾಡಿ ಇದರ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್(ರಿ.) ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಪ್ರಾರ್ಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇದರ ಸಹಯೋಗ ದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ದಿನಾಂಕ 31-05-2022 ನೇ ಮಂಗಳವಾರ ಸ.ಹಿ.ಪ್ರಾ. ಶಾಲೆ ನೆಲ್ಯಾಡಿಯಲ್ಲಿ ನಡೆಯಿತು.
ದಯಾನಂದ ರೈ ಮನವಳಿಕೆ ಗುತ್ತು ಅಧ್ಯಕ್ಷರು ಲಯನ್ಸ್ ಕ್ಲಬ್ ದುರ್ಗಾಂಬಾ ಆಲಂಕಾರು ರವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೆಲ್ಯಾಡಿಯ ಅಧ್ಯಕ್ಷೆಯಾದ ಜಯಂತಿ ಬಿ ಎಂ ರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಡಾ.ಗೌರಿ ಪೈ ಅಧ್ಯಕ್ಷರು ಆನಂದಾಶ್ರಮ ಸೇವಾ ಟ್ರಸ್ಟ್(ರಿ) ಪುತ್ತೂರು, ಶಾಂತರಾಜ್ ನೇತ್ರಾಧಿಕಾರಿಗಳ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಡಾ.ಅನಿಲ್ ರಾಮಾನುಜನ್ ನೇತ್ರಾಧಿಕಾರಿಗಳ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಡಾ.ಭಾನು ನೇತ್ರ ತಜ್ಞರು ವೆನ್ಲಾಕ್ ಆಸ್ಪತ್ರೆ, ಆನಂದ ಅಜಿಲ ಮುಖ್ಯಗುರುಗಳು ಸ.ಹಿ.ಪ್ರಾ ಶಾಲೆ ನೆಲ್ಯಾಡಿ, ಇಕ್ಬಾಲ್ ಗ್ರಾ.ಪಂ ಸದಸ್ಯರು ನೆಲ್ಯಾಡಿ, ಮಹಮ್ಮದ್ ರಫೀಕ್ ಪ್ರಿಯದರ್ಶಿನಿ ನೆಲ್ಯಾಡಿ, ನಿತ್ಯಾನಂದ ಶೆಟ್ಟಿ ಕಾರ್ಯದರ್ಶಿಗಳು ಲಯನ್ಸ್ ಕ್ಲಬ್ ದುರ್ಗಾಂಬಾ ಅಲಂಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
42ನೇ ಶಿಬಿರದ ಸಂಘಟಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಸುಧೀರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ವಂದಿಸಿದರು.
ಶಿಬಿರದಲ್ಲಿ 250ಕ್ಕೂ ಮಿಕ್ಕಿ ಸಾರ್ವಜನಿಕರು ನೇತ್ರ ತಪಾಸಣೆ ಮಾಡಿಸಿಕೊಂಡರು. 225 ಕನ್ನಡಕಗಳನ್ನು ಆನಂದಾಶ್ರಮದ ವತಿಯಿಂದ ವಿತರಿಸಲಾಯಿತು. 10 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಆಯ್ಕೆಯಾದರು.
ಜಾಹೀರಾತು