ನೇಸರ ಜೂ.01: ಜೇಸಿಐ ಭಾರತದ ವಲಯ ಹದಿನೈದರ ಮಧ್ಯಂತರ ಸಮ್ಮೇಳನ ರಂಗೋಲಿ ಕಾರ್ಯಕ್ರಮವು ಮಡಂತ್ಯಾರಿನಲ್ಲಿ ಜರುಗಿತು.
ಈ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಕುಂದಾಪುರ ಸಿಟಿ ಘಟಕವು ತನ್ನ ಅರ್ಧವರ್ಷದ ಎಲ್ಲಾ ವಿಭಾಗಗಳಲ್ಲಿನ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಾಗಾರಗಳಿಗೆ ಹಲವಾರು ಪ್ರಶಸ್ತಿ ಮನ್ನಣೆಗಳಿಗೆ ಭಾಜನವಾಯಿತು.
ಜೇಸಿ.ಅಭಿಲಾಷ್ ಬಿ ಎ ಇವರ ಅಧ್ಯಕ್ಷೀಯ ಅವಧಿಯಲ್ಲಿ ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹದಿನೈದಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳು, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಜಾಗೃತಿ ಜಾಥಾ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಅನಾಥಾಶ್ರಮಗಳಲ್ಲಿ ಅನ್ನದಾಸೋಹ, ನೂತನ ಘಟಕದ ಕೊಡುಗೆ, ಬೀಚ್ ಕ್ಲೀನಿಂಗ್, ಸೀಡ್ ಬಾಲ್ ತಯಾವಕೆ, ಸಸಿ ನೆಡುವಿಕೆ, ಹಲವಾರು ಎಲೆಮರೆ ಸಾಧಕರಿಗೆ ಸನ್ಮಾನ, ವಲಯದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಂತಾದ ಕಾರ್ಯಕ್ರಮಗಳ ಸಾಧನೆಗೆ ಪ್ರಾಂತ್ಯದ ಔಟ್ ಸ್ಟ್ಯಾಂಡಿಂಗ್ ಅಧ್ಯಕ್ಷ ವಿನ್ನರ್ ಹಾಗೂ ಪ್ರಾಂತ್ಯದ ಔಟ್ ಸ್ಟ್ಯಾಂಡಿಂಗ್ ರನ್ನರ್ ಘಟಕ ಎಂಬ ಹಿರಿಮೆಗೆ ಪಾತ್ರವಾಯಿತು.
ಮಾತ್ರವಲ್ಲದೆ ಕಾರ್ಯಕ್ರಮ ವಿಭಾಗ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಹದಿನೈದಕ್ಕೂ ಹೆಚ್ಚು ಮನ್ನಣೆಗಳಿಗೆ ಭಾಜನವಾಯಿತು .
ಸಮ್ಮೇಳನದಲ್ಲಿ ಘಟಕದ ವತಿಯಿಂದ ಸ್ಥಾಪಕಾಧ್ಯಕ್ಷ ಜೇಸಿ.ಹುಸೇನ್ ಹೈಕಾಡಿ, ಪೂರ್ವ ವಲಯಾಧ್ಯಕ್ಷ ಜೇಸಿ.ಕಾರ್ತಿಕೇಯ ಮಧ್ಯಸ್ಥ, ನಿಕಟಪೂರ್ವ ಅಧ್ಯಕ್ಷ ಜೇಸಿ.ವಿಜಯ ಭಂಡಾರಿ, ಪೂರ್ವ ಅಧ್ಯಕ್ಷ ಜೇಸಿ.ನಾಗೇಶ್ ನಾವಡ, ಜೇಸಿ.ಮಹಾರುದ್ರ, ಜೇಸಿ.ನಾಗರಾಜ್ ಪಟವಾಲ್ ಉಪಸ್ಥಿತರಿದ್ದರು .
ಜಾಹೀರಾತು