ನೇಸರ ಜೂ.02: ಹತ್ಯಡ್ಕ ಗ್ರಾಮದ ಕುಂಟಾಲಪಳಿಕೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಉಪಕರಣ ಗಳನ್ನು ವಿತರಣೆ ಮಾಡಲಾಯಿತು.
ದಾನಿಗಳಾದ ಸೌಮ್ಯಾ ತುಳುಪುಳೆಯವರು , ಸ್ವತಹ ತಾವು ಮಾತ್ರವಲ್ಲದೆ ಬೆಂಗಳೂರಿನ ರಾಘವೇಂದ್ರ ಭಟ್, ಹರೀಶ್ ಅಭ್ಯಂಕರ್, ಅರೆಕ್ಕಲ್ ಮಹಾದೇವ ಭಟ್ ಮತ್ತು ನವೀನ್ ಶೆಂಡ್ಯೆ ಇವರೊಂದಿಗೆ ಮಕ್ಕಳಿಗೆ ಕಲಿಕೆಗೆ ಉಪಯುಕ್ತವಾಗುವ ಪೆನ್ಸಿಲ್, ರಬ್ಬರ್, ಪೆನ್, ಮತ್ತು ಪುಸ್ತಕಗಳನ್ನು ನೀಡಿದರು 1ನೇ ತರಗತಿಯಿಂದ 3ನೇ ತರಗತಿಯವರೆಗಿನ ಮಕ್ಕಳಿಗೆ ನಲಿಕಲಿ ಕಾರ್ಯಕ್ರಮದ ಭಾಗವಾಗಿ ಫೈಬರ್ ಮೇಜುಗಳನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಉಷಾ.ವಿ, ಅಧ್ಯಾಪಕರಾದ ಸಂತೋಷ್, ಸವಿತಾ, ಕಸ್ತೂರಿ ಉಪಸ್ಥಿತರಿದ್ದು ಮಕ್ಕಳಿಗಾಗಿ ಸೌಲಭ್ಯಗಳನ್ನು ಒದಗಿಸಿಕೊಟ್ಟ ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು
ಕೆಲದಿನಗಳ ಹಿಂದೆ ಹಳೆ ವಿದ್ಯಾರ್ಥಿನಿಯಾದ ತೃಪ್ತಿ ತುಳುಪುಳೆಯವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ಬಾಬ್ತು ಶಾಲೆಗೆ ಕಸದ ಬುಟ್ಟಿಗಳನ್ನು ನೀಡಿದ್ದನ್ನು ಸ್ಮರಿಸಿಕೊಂಡರು. ಸೌಮ್ಯಾ ತುಳುಪುಳೆ , ಹರೀಶ್ ಅಭ್ಯಂಕರ್ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಬೊಳ್ಳೋಡಿ, ಹಳೆವಿದ್ಯಾರ್ಥಿಗಳಾದ ಪ್ರೀತಿ ತುಳುಪುಳೆ, ಗಣರಾಜ್ ತುಳುಪುಳೆ, ಈ ಹಿಂದೆ ಗೌರವ ಶಿಕ್ಷಕಿಯಾಗಿ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ವೀಣಾ ವಳಂಬಳ, ಅರಸಿನಮಕ್ಕಿಯ ಅವಿನಾಶ್ ಭಿಡೆ ಉಪಸ್ಥಿತರಿದ್ದರು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಸವಿತಾ ವಂದಿಸಿದರು.
ಜಾಹೀರಾತು