ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಪತ್ತೆಹಚ್ಚಿದ ಧರ್ಮಸ್ಥಳ ಪೊಲೀಸರು

ಶೇರ್ ಮಾಡಿ

ನೇಸರ ಜೂ.02: ಧರ್ಮಸ್ಥಳ ಪೊಲೀಸರಿಂದ ಸೌತ್ತಡ್ಕ ಶ್ರೀ ಗಣಪತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿಯ ಪತ್ತೆ ಸುಮಾರು 3,08.500/- ಲಕ್ಷಬೆಲೆ ಬಾಳುವ ಚಿನ್ನಭರಣ ವಶಕ್ಕೆ.
ಬೆಳ್ತಂಗಡಿ ಮೂಲದ ಮುಂಬೈ ನಿವಾಸಿಯಾದ ಬಾಲಚಂದ್ರ.ಡಿ ಎಂಬುವವರು ಸಂಸಾರ ಸಮೇತ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತ್ತಡ್ಕ ಶ್ರೀ ಮಹಾಗಣಪತಿ ದೇವರ ಸೇವೆ ಮತ್ತು ದರ್ಶನವನ್ನು ಪಡೆದು ತೀರ್ಥ, ಪ್ರಸಾದವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಬಾಲಚಂದ್ರ ಡಿ ಯವರ ಪತ್ನಿಯ ಕೈಯಲ್ಲಿ ಇದ್ದ ಬ್ಯಾಗಿನ ಜಿಪ್‌ಅನ್ನು ತೆರೆದು ಅದರೊಳಗಿದ್ದ ಚಿನ್ನಾಭರಣದ ಪರ್ಸ್‌ ಕಳ್ಳತನವಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರ ಅನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಠಾಣಾ ಅ,ಕ್ರ 30-2022 ಕಲಂ: 379 ಐ,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಯಿತು.

ದಿನಾಂಕ 31-05-22ರ ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಧರ್ಮಸ್ಥಳ ಠಾಣೆಯ ಪೊಲೀಸರು ಬೆಳಗ್ಗೆ 5:00 ಗಂಟೆಗೆ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಯು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಳು.
ಶ್ರೀಮತಿ ಭೀಮವ್ವ @ ನಾಗಮ್ಮ (ವ.63) ಗದಗ ಜಿಲ್ಲೆ ಆರೋಪಿ ಸ್ವಂತ ಮನೆಯಾದ ಕುಷ್ಟಗಿಚಾಲ್‌ ಮನೆ ಸಬ್ ಜೈಲ್‌ ರೋಡ್‌ ಬೆಟಗೇರಿ ಎಂಬಲ್ಲಿಂದ ಸುಮಾರು 1) ವಜ್ರದ ನೆಕ್ಲೇಸ್‌-ಒಂದು 18 ಗ್ರಾಂ .308 ಮಿಲಿ 2) ಉಂಗುರ –ಒಂದು 2.700 ಗ್ರಾಂ 3) ಉಂಗುರ-ಒಂದು 3.140 ಗ್ರಾಂ 4). ಜುಮುಕಿ ಒಂದು ಜೊತೆ 25.940 ಗ್ರಾಂ ಅಂದಾಜು ಆಭರಣಗಳನ್ನು ಧರ್ಮಸ್ಥಳ ಪೊಲೀಸ್‌ ಪಿಎಸ್ಐ ಕೃಷ್ಣಕಾಂತ ಅ ಪಾಟೀಲ್‌ ರವರ ವಿಶೇಷ ತಂಡದ ಸಿಬ್ಬಂದಿಗಳಾದ, ಹೆಚ್‌ ಸಿ ಶೇಖರ್‌, ಹೆಚ್‌ ಸಿ ಬೆನ್ನಿಚ್ಚನ್‌, ಹೆಚ್ ಸಿ ಪ್ರಶಾಂತ್‌, ಹೆಚ್ ಸಿ ರಾಹುಲ್‌, ಹೆಚ್‌ ಸಿ ಸತೀಶನಾಯ್ಕ ಜಿ, ಹೆಚ್‌ ಸಿ ಕೃಷ್ಣಪ್ಪ, ಹೆಚ್‌ ಸಿ ರವೀಂದ್ರ, ಪಿ ಸಿ ಅನಿಲ್‌ ಕುಮಾರ್‌, ಚಾಲಕ ಎಪಿಸಿ ಲೋಕೇಶ್‌, ಮಪಿಸಿ ಸೌಭಾಗ್ಯ ಆರೋಪಿಯ ಊರಾದ ಗದಗಕ್ಕೆ ತೆರಳಿ ಮನೆಯಲ್ಲಿದ್ದ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿಯು ವಿವಿಧ ಯಾತ್ರರ್ಥ ಸ್ಥಳಗಳಿಂದ ಕಳ್ಳತನ ಮಾಡುವ ಅಬ್ಯಾಸದವಳಾಗಿರುತ್ತಾಳೆ, ಸದ್ರಿ ಆರೋಪಿಯ ಮೇಲೆ ಮುರುಡೇಶ್ವರ, ಬಟ್ಕಳ, ಸುಬ್ರಮಣ್ಯ, ಮುಂತಾದ ಕಡೆ ಕಳ್ಳತನ ಪ್ರಕರಣ ದಾಖಲಾಗಿರುವು ಕಂಡು ಬಂದಿರುತ್ತದೆ.
ಸದ್ರಿ ಪತ್ತೆ ತಂಡದಲ್ಲಿ ಮಾನ್ಯ ಪೊಲೀಸ್‌ ಅಧೀಕ್ಷಕರು ಋಷೀಕೇಶ್‌ ಸೋನಾವಣೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಕುಮಾರ್‌ ಚಂದ್ರ, ಪೊಲೀಸ್‌ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ಶಿವಂಶು ರಜಪೂತ್‌ ಮತ್ತು ಪೊಲೀಸ್‌ ವೃತ್ತ ನಿರೀಕ್ಷಕರು ಬೆಳ್ತಂಗಡಿ ವೃತ್ತ ಶಿವಕುಮಾರ್‌ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಕೃಷ್ಣಕಾಂತ ಅ ಪಾಟೀಲ್‌ ರವರ ವಿಶೇಷ ತಂಡದ ಸಿಬ್ಬಂದಿಗಳಾದ, ಹೆಚ್‌ ಸಿ ಬೆನ್ನಿಚ್ಚನ್‌, ಹೆಚ್ ಸಿ ಪ್ರಶಾಂತ್‌, ಹೆಚ್ ಸಿ ರಾಹುಲ್‌, ಹೆಚ್‌ ಸಿ ಸತೀಶನಾಯ್ಕ ಜಿ, ಹೆಚ್‌ ಸಿ ಶೇಖರ್‌, ಹೆಚ್‌.ಸಿ ಕೃಷ್ಣಪ್ಪ, ಹೆಚ್‌.ಸಿ ರವೀಂದ್ರ ಪಿ.ಸಿ ಅನಿಲ್‌ ಕುಮಾರ್‌, ಚಾಲಕ ಎಪಿಸಿ ಲೋಕೇಶ್‌, ಮಪಿಸಿ ಸೌಭಾಗ್ಯ ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್‌ ಮತ್ತು ದಿವಾಕರ ರವರು ಬಾಗವಹಿಸಿರುತ್ತಾರೆ, ಪ್ರಕರಣ ದಾಖಲಾಗಿ ಶೀಘ್ರವಾಗಿ ಪ್ರಕರಣ ಬೇದಿಸಿದ ಪೊಲೀಸ್‌ ತಂಡಕ್ಕೆ ಜಿಲ್ಲಾ ಪೊಲೀಸ್‌ ಅಧಿಕ್ಷಕರು ಬಹುಮಾನವನ್ನು ಘೋಷಿಸಿರುತ್ತಾರೆ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!