ನೇಸರ ಜೂ.04: ಜೂನ್ 5 ವಿಶ್ವ ಪರಿಸರ ದಿನ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ, ಅದು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿರಲಿ ಎಂದು ಬೆಥನಿ ಐಟಿಐ ನೆಲ್ಯಾಡಿ ಇದರ ನಿರ್ಧೇಶಕರಾದ ರೆ|ಫಾ| ಮೆಲ್ವಿನ್ ಮ್ಯಾಥ್ಯೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು, ಅವರು ವಿಶ್ವ ಪರಿಸರ ದಿನದ ಅಂಗವಾಗಿ ಬೆಥನಿ ಐಟಿಐ ನೆಲ್ಯಾಡಿಯ ಪರಿಸರದಲ್ಲಿ ಸಾಗುವಾನಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನೆಲ್ಲ ಹೊತ್ತ ಭೂಮಿ ಒಂದೇ ಇರಲು, ಆ ಭೂಮಿ ಮತ್ತು ಪರಿಸರದ ಸಂರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಮತ್ತು ವಿಶ್ವಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗಿರದೆ ನೆಟ್ಟ ಪ್ರತಿಗಿಡದದ ಪೋಷಣೆ, ರಕ್ಷಣೆ ತಾಯಿ ಮಗುವಿನ ಸಂಬಂಧದಂತೆ ನಿರಂತರತೆಯಲ್ಲಿ ಇರಬೇಕು ಎಂದು ತಿಳಿಸಿದರು. ನೆಟ್ಟ ಪ್ರತಿಗಿಡದ ಪೋಷಣೆ, ರಕ್ಷಣೆ ತಾಯಿ ಮಗುವಿನ ಸಂಬಂಧದಂತೆ ನಿರಂತರತೆಯಲ್ಲಿ ಎಂದು ಫಿಟ್ಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ವಿಶ್ವ ಪರಿಸರ ದಿನದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್ ಸ್ವಾಗತಿಸಿ, ಎಲೆಕ್ಟ್ರೋನಿಕ್ಸ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ವಂದಿಸಿ ಕಾರ್ಯಕ್ರಮ ನಿರೂಪಿಸದರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಸಹಕರಿಸಿದರು.
ಜಾಹೀರಾತು