ನೇಸರ ಜೂ.05: ನೆಲ್ಯಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ರಂಗಭಾರತಿ ಸಭಾಂಗಣದಲ್ಲಿ ಜೂನ್.4 ರಂದು ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ, ಜೇಸಿಐ ನೆಲ್ಯಾಡಿ, ಬೆಸ್ಟ್ ಫ್ರೆಂಡ್ ವಾಟ್ಸಪ್ ಗ್ರೂಪ್, ಸೈಂಟ್ ಜಾರ್ಜ್ ನೆಲ್ಯಾಡಿ ಇವರ ವತಿಯಿಂದ ಬಡಮಕ್ಕಳಿಗೆ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮವು ಜರುಗಿತ್ತು.
ಕಾರ್ಯಕ್ರಮವನ್ನು ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ಮುಖ್ಗಸ್ಥರಾದ ಅಬ್ರಹಾಂ ವರ್ಗೀಸ್ ಉದ್ಘಾಟಿಸಿದರು. ವೇದಿಕೆಯಲ್ಲಿ ಕೃಷ್ಣಪ್ಪ ಉದ್ಯಮಿ ಬೆಂಗಳೂರು, ಸರ್ವೂತ್ತಮ ಗೌಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಉಷಾ ಅಂಚನ್ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಕೆ ಪಿ.ತೋಮಸ್ ಉದ್ಯಮಿ ನೆಲ್ಯಾಡಿ, ಆನಂದ ಅಜಿಲ ಮುಖ್ಯ ಗುರುಗಳು ನೆಲ್ಯಾಡಿ, ಇಸ್ಮಾಯಿಲ್ ನೋಟರಿ ವಕೀಲರು, ಅಬ್ದುಲ್ ಜಬ್ಬಾರ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ನೆಲ್ಯಾಡಿ ಉಪಸ್ಥಿತರಿದ್ದರು. ಜೇಸಿ.ಜಯಂತಿ ಬಿ.ಎಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಪಡುಬೆಟ್ಟು, ಕೊಣಾಲು, ಹೊಸಮಜಲು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ, ಸೈಂಟ್ ಜಾರ್ಜ್ ನೆಲ್ಯಾಡಿ ಶಾಲೆಯ ಒಟ್ಟು ಸುಮಾರು 100 ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು
ಕಾರ್ಯಕ್ರಮ ಸಂಘಟಕರಾದ ರಫೀಕ್ ಪ್ರಸ್ತಾವಿಕವಾಗಿ ಮಾತನಾಡಿದರು. ನೆಲ್ಯಾಡಿ ಶಾಲಾ ದೈಹಿಕ ಶಿಕ್ಷಕರಾದ ಜನಾರ್ಧನ ರವರು ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು