ನೇಸರ ಜೂ.07: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೇಸಿಐ ಉಪ್ಪಿನಂಗಡಿ ಘಟಕ ನೇತೃತ್ವದಲ್ಲಿ, ವಿಕ್ರಂ ಯುವಕ ಮಂಡಲ ಮತ್ತು ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಕಾಂಚನ ಆಶ್ರಯದಲ್ಲಿ “ಅರಣ್ಯ ಬೆಳೆಸುವ ಪ್ರಕೃತಿ ಉಳಿಸೋಣ” ಅನ್ನುವ ಆಶಯದೊಂದಿಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು, ಜೇಸಿ ವನ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಹಿರಿಯರಾದ ಡೆನ್ನಿಸ್ ಪಿಂಟೊ ಭಾಗವಹಿಸಿ ಬಹುಮಾನಗಳನ್ನು ವಿತರಿಸಿ ಮಾತನಾಡಿ, ಮನುಷ್ಯರ ಅಭಿವೃದ್ಧಿ ಕಾರ್ಯಗಳ ಜೊತೆಗೆ ಇತರ ಜೀವ ಸಂಕುಲದ ಉಳಿವಿಗೆ ಮನುಷ್ಯ ಜಾಗೃತನಾಗಬೇಕಿದೆ ಎಂದರು. ಮುಖ್ಯಗುರುಗಳಾದ ಶ್ರೀ ಲಕ್ಷ್ಮಣ ಮಾತನಾಡಿ, ಇರುವುದೊಂದೇ ಭೂಮಿ. ಅದನ್ನು ಯೋಗ್ಯ ರೀತಿಯಲ್ಲಿ ಕಾಪಾಡಿ ಭವಿಷ್ಯದ ಪೀಳಿಗೆಗೆ ನೀಡಬೇಕಾಗಿದೆ. ಆ ದೆಸೆಯಲ್ಲಿ ಜೇಸಿಐ ಮತ್ತು ವಿಕ್ರಂ ಯುವಕ ಮಂಡಲದ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಜೇಸಿಐ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದಮನೆ ಮಾತನಾಡಿ, ದಿನನಿತ್ಯ ಪರಿಸರ ಜಾಗೃತಿಯನ್ನು ಮೈಗೂಡಿಸಿಕೊಂಡು ಆರೋಗ್ಯಯುತ ಪರಿಸರವನ್ನು ನಿರ್ಮಾಣ ಮಾಡೋಣ ಎಂದರು. ಸ್ಥಳೀಯ ಹೋಟೆಲ್ ಮಾಲೀಕರಾದ ಶಂಕರ್ ನಾಯಕ್ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಶಾಲಾ ಕೈತೋಟದಲ್ಲಿ ಗಿಡವನ್ನು ನೆಡಲಾಯಿತು. ಪ್ರಣತಿ, ಚರಣ್, ಪ್ರಣವಿ ಸೇರಿದಂತೆ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿಕ್ರಂ ಯುವಕ ಮಂಡಲ ಅಧ್ಯಕ್ಷ ಜೇಸಿ ಅನಿಲ್ ಪಿಂಟೊ, ಉಪಾಧ್ಯಕ್ಷರಾದ ಜೇಸಿ ಸಚಿನ್ ಮುದ್ಯ, ಜೇಸಿ ಮಹೇಶ್ ಖಂಡಿಗ, ಜೇಸಿ ನಾಗೇಶ್ ಬಿದಿರಾಡಿ ಮತ್ತು ಜೇಸಿ ಪುರುಷೋತ್ತಮ ತೋಟದ ಮನೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 150 ಮಿಕ್ಕಿ ಗಿಡಗಳನ್ನು ವಿದ್ಯಾರ್ಥಿಗಳಿಗೆ ಹಂಚಿ, ಅದನ್ನು ನೆಟ್ಟು ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಜಾಹೀರಾತು