ನೇಸರ ನ11: ಕೊಕ್ಕಡ ಶ್ರೀ ವೈಧ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ದೇವರ ಗದ್ದೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಬೃಹತ್ ನೇಜಿ ನಾಟಿ ಕಾರ್ಯಕ್ರಮ ನಡೆದಿದ್ದು, ಇದೀಗ ಕಟಾವಿಗೆ ಬಂದಂತಹ ಪೈರನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಲೆರುದು ಕೊಯ್ಯುವ ಸಂಪ್ರದಾಯವನ್ನು ನ.11 ರಂದು ನೆರವೇರಿಸಲಾಯಿತು.
ದೇವಸ್ಥಾನದಲ್ಲಿ ಶ್ರೀ ದೇವರ ಸಮ್ಮುಖದಲ್ಲಿ ಬೆಳಿಗ್ಗೆ ಪ್ರಾರ್ಥಿಸಿ, ಬಳಿಕ ಗದ್ದೆಗೆ ಹಾಲೆರೆದು,ತೆನೆ ಪೂಜೆಯನ್ನು ನೆರವೇರಿಸಿ ಭತ್ತದ ಕಟಾವನ್ನು ಸಾಂಕೇತಿಕವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಳೆಂಜ ಮೇದಿನಿ ಫಾರ್ಮ್ಸ್‌ನ ಮಾಲಕ ಕೆ. ಶ್ರೀಧರ್ ರಾವ್ ಕಾಯಡ, ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಮೋಹನದಾಸ ಗೌಡ, ಕೊಕ್ಕಡಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಸುಬ್ರಹ್ಮಣ್ಯ ಉಪ್ಪಾರ್ಣ, ಸಾಂತಪ್ಪ ಗೌಡ, ಅಣ್ಣಿ ಗೌಡ, ಗ್ರಾ.ಪಂ. ಸದಸ್ಯೆ ವನಜಾಕ್ಷಿ, ಗ್ರಾಮಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.