ಸೌತಡ್ಕದ ಶ್ರೀ ಗಣೇಶ ಕಲಾ ಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಶೇರ್ ಮಾಡಿ

ನೇಸರ ಜೂ.21: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸೌತಡ್ಕ, ಅಮೃತ ಗ್ರಾಮ ಪಂಚಾಯತ್, ಕೊಕ್ಕಡ ಇದರ ಜಂಟಿ ಆಶ್ರಯದಲ್ಲಿ ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸೌತಡ್ಕದ ಶ್ರೀ ಗಣೇಶ ಕಲಾ ಮಂದಿರದಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಹರೀಶ್ ರಾವ್ ಕನ್ಯಾಡಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಸೌತಡ್ಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿ.ವಿ ರವೀಂದ್ರನಾಥ್, ಲೆಕ್ಕಪರಿಶೋಧಕರು ಸಾಗರ, ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ, ಕೃಷ್ಣ ಭಟ್ ಕೆ, ಅಧ್ಯಕ್ಷರು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಯೋಗಿಶ್ ಆಲಂಬಿಲ, ಅಧ್ಯಕ್ಷರು ಅಮೃತ ಗ್ರಾಮ ಪಂಚಾಯತ್ ಕೊಕ್ಕಡ, ದೀಪಕ್ ರಾಜ್, ಅಭಿವೃದ್ಧಿ ಅಧಿಕಾರಿಗಳು ಅಮೃತ ಗ್ರಾಮ ಪಂಚಾಯತ್ ಕೊಕ್ಕಡ, 15 ದಿನಗಳ‌ ಕಾಲ ಉಚಿತವಾಗಿ ಯೋಗಭ್ಯಾಸವನ್ನು ನೀಡಿದ ಉಜಿರೆ ಕಾಲೇಜಿನ ವಿಧ್ಯಾರ್ಥಿಗಳಾದ ಡಾ|ಮಾರುತಿ ಕೊಪ್ಪಳ, ಪರಿಪೂರ್ಣ, ಚಂದನ, ವೇದ್ಯಾ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ರಾಮ ಶಾಲೆ ಪಟ್ಟೂರು ಇಲ್ಲಿಯ ವಿಧ್ಯಾರ್ಥಿಗಳು, ಸರಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳು ಹಾಗೂ ಊರಿನವರು ಉಪಸ್ಥಿತರಿದ್ದರು.


ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ ಸ್ವಾಗತಿಸಿ, ಶ್ರೀ ರಾಮ ಶಾಲೆ ಪಟ್ಟೂರು ಶಿಕ್ಷಕ ಚಂದ್ರಶೇಖರ್ ಶೇಟ್ ಧನ್ಯವಾದಗೈದರು, ಚಂದನ ಹಾಗೂ ಕೇಶವ ಕೊಲ್ಲಾಜೆ ಪಲ್ಕೆ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!