ನೇಸರ ಜೂ.21: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಜೂ.21 ಮಂಗಳವಾರದಂದು ವಿಶ್ವ ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಯೋಗ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿಯಾದ ಮೂಲಚಂದ್ರ ಉಪಸ್ಥಿತರಿದ್ದರು. ಯೋಗ ದಿನದ ಮಹತ್ವದ ಬಗ್ಗೆ ಕುಮಾರಿ ದಿವ್ಯ ಮಾತಾಜಿ ಮತ್ತು ಶಾಲಾ ಮುಖ್ಯ ಶಿಕ್ಷಕರಾದ ಗಣೇಶ್ ವಾಗ್ಲೆ ಶ್ರೀಮಾನ್ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಶ್ರೀಮತಿ ತ್ರಿವೇಣಿ ಮಾತಾಜಿ ಇವರು ಯೋಗ ಕಾರ್ಯಕ್ರಮವನ್ನು ನಿರ್ವಹಿಸಿದರು.