ನೇಸರ ಜೂ.22:ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜೇಸಿಐ ವಿಟ್ಲ ಘಟಕದ ವತಿಯಿಂದ ವಿಠಲ ಪ್ರೌಢ ಶಾಲೆ ವಿಟ್ಲ ಸಂಸ್ಥೆಯಲ್ಲಿ ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ ಮತ್ತು ಮಾನವೀಯತೆಗಾಗಿ ಯೋಗ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಸಭಾಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಯೋಗ ಗುರು ಕೃಷ್ಣಭಟ್ ಉದ್ಘಾಟಿಸಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಇಂದಿನ ಧಾವಂತದ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಸಾಧನವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಜೆಸಿಐ ವಿಟ್ಲ ಇದರ ಕಾರ್ಯದರ್ಶಿ ಜೆಸಿ ನವೀನ್ ಚಂದ್ರ ಹಾಗೂ ಸಂಸ್ಥೆಯ ಹಿರಿಯ ಶಿಕ್ಷಕಿ ಶ್ರೀಮತಿ ವಾಣಿ ವಿ ಭಾಗವಹಿಸಿದ್ದರು.
ಶಿಕ್ಷಕರಾದ ಶಂಕರನಾರಾಯಣ ಪ್ರಸಾದ ಸ್ವಾಗತಿಸಿದರು. ಶಿಕ್ಷಕ ಜೇಸಿ ರಮೇಶ್ ಬಿ.ಕೆ ಅವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ವಿಶ್ವನಾಥ ರಾಥೋಡ್ ಧನ್ಯವಾದ ನೀಡಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ವಿಶ್ವನಾಥ್ ರಾಥೋಡ್ ಹಾಗೂ ಶಿಕ್ಷಕರಾದ ಎಂ ಸಂಕಪ್ಪ ಗೌಡ ಇವರು ಯೋಗ ತರಬೇತಿ ನೀಡಿದರು. ಶಿಕ್ಷಕರಾದ ಜೇಸಿ ರಾಜಶೇಖರ್ ಉಪಸ್ಥಿತರಿದ್ದರು.