ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾದಲ್ಲಿ ಊರುಅಭಿವೃದ್ಧಿಯಾದಂತೆ : ಚಂದ್ರಶೇಖರ ಶೇಟ್

ಶೇರ್ ಮಾಡಿ

ಪಟ್ರಮೆ: ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಲ್ಲಿ ತನ್ನಿಂದ ತಾನೇ ಆ ಊರು ಕೂಡಾ ಅಭಿವೃದ್ಧಿ ಹೊಂದಿದಂತೆ. ವ್ಯವಸ್ಥೆಯ ದೃಷ್ಟಿಯಲ್ಲಿ ಊರು ಎಷ್ಟೇ ಅಭಿವೃದ್ಧಿ ಹೊಂದಿದರೂ ಜನರು ಧಾರ್ಮಿಕ ವಿಚಾರವನ್ನು ಮೈಗೂಡಿಸಿಕೊಳ್ಳದಿದ್ದರೆ ಅಂತಹ ಅಭಿವೃದ್ಧಿ ಅಪೂರ್ಣವೆಂದೆನಿಸಿಕೊಳ್ಳುತ್ತದೆ.

ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಶೇಟ್ ನುಡಿದರು.
ಅವರು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ದೈವಗಳ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.‌

ಪ್ರತಿಯೊಬ್ಬರ ಮನೆಯಲ್ಲೂ ನಿತ್ಯ ಭಜನೆಗಳು ನಡೆದಾಗ ಋಣಾತ್ಮಕ ಶಕ್ತಿ ದೂರವಾಗಿ ನಮ್ಮೆಲ್ಲರ ಮನೆ ಮನ ಬೆಳಗುವುದರಲ್ಲಿ ಸಂಶಯವಿಲ್ಲ.
ಪವಿತ್ರ ಬಾಸಿಂಗವನ್ನು ಹಣೆಯಲ್ಲಿ ಧರಿಸಿ ಲಕ್ಷ್ಮೀನಾರಾಯಣರಂತೆ ಸತಿಪತಿಗಳ ಆಗಬೇಕಾದ ದಂಪತಿಗಳೆಂದು ಅದೇ ಹಸಿಮಣೆಯ ಮುಂದೆ ಪಾಶ್ಚಿಮಾತ್ಯ ಹಾಡುಗಳಿಗೆ ಮನಸ್ಸೋ ಇಚ್ಛೆ ಕುಣಿಯುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರುತ್ತದೆ. ಸಂಸ್ಕೃತಿಯನ್ನು ಮರೆತು ಬಾಳದೆ ಹಿರಿಯರು ಹಾಕಿಕೊಟ್ಟಂತಹ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗುವ ಮನಸ್ಥಿತಿ ನಮ್ಮಲ್ಲಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮೊಕ್ತೇಸರ ಶ್ರೀಧರ ಶಬರಾಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ರೋಹಿತ್ ಯಡಪಡಿತ್ತಾಯ, ಪಟ್ರಮೆ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಪವಿತ್ರಪಾಣಿ ಪ್ರಶಾಂತ ಶಬರಾಯ ಉಪಸ್ಥಿತರಿದ್ದರು.‌
ವಿದ್ಯಾ ಸರಸ್ವತಿ ಸ್ವಾಗತಿಸಿ, ಉಮೇಶ್ ಅಲಂಗೂರು ವಂದಿಸಿದರು. ಸುಶ್ಮಿತಾ ಮತ್ತು ದಿವ್ಯ ಪ್ರಾರ್ಥನೆ ಮಾಡಿದರು. ಹರ್ಷಿತಾ ಕೊಳಂಬೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಊರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಧಾರ್ಮಿಕ ಸಭೆಯ ಬಳಿಕ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾಯನ ಸಂಭ್ರಮ ನಡೆಯಿತು.

Leave a Reply

error: Content is protected !!