ಅತ್ತೆ ಜೊತೆ ಆಳಿಯನ ಲವ್ವಿಡವ್ವಿ; ರೊಮ್ಯಾನ್ಸ್ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕ ಜೋಡಿ

ಶೇರ್ ಮಾಡಿ

ಅತ್ತೆ ಜೊತೆ ಅಕ್ರಮ ಸಂಬಂಧವನ್ನಿಟ್ಟುಕೊಂಡ ಆಳಿಯನನ್ನು ರೆಡ್‌ ಹ್ಯಾಂಡ್‌ ಆಗಿ ಸೆರೆ ಹಿಡಿದು ಥಳಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸುನಿಲ್ ಕುಮಾರ್ ಎಂಬಾತ ತನ್ನ ಅತ್ತೆ ಜೊತೆ ಅಕ್ರಮ ಸಂಬಂಧವನ್ನಿಟ್ಟುಕೊಂಡ ಆರೋಪದಲ್ಲಿ ಗ್ರಾಮಸ್ಥರಿಂದ ಧರ್ಮದೇಟು ತಿಂದಿದ್ದಾನೆ.

ಘಟನೆ ಹಿನ್ನೆಲೆ:
ಬಿಹಾರದ ಜಮುಯಿ ಜಿಲ್ಲೆಯ ಲಕ್ಷ್ಮೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುನಿಲ್‌ ಕುಮಾರ್‌ ಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಸುನಿಲ್‌ ಕುಮಾರ್‌ ಹಾಗೂ ಅತ್ತೆ ರಹಸ್ಯ ಸಂಬಂಧವನ್ನಿಟ್ಟುಕೊಂಡಿದ್ದರು.ಅತ್ತೆ ಮನೆಗೆ ಭೇಟಿ ಕೊಟ್ಟ ವೇಳೆ ಆಗಾಗ ಸುನಿಲ್‌ ಹಾಗೂ ಅತ್ತೆ ಇಬ್ಬರು ಭೇಟಿ ಆಗುತ್ತಿದ್ದರು. ರಾತ್ರಿಯ ಸಮಯದಲ್ಲಿ ಭೇಟಿ ಆಗುತ್ತಿದ್ದರು.

ಆದರೆ ಇತ್ತೀಚೆಗೆ ಆಳಿಯ ಹಾಗೂ ಅತ್ತೆ ರಾತ್ರಿಯ ವೇಳೆ ಭೇಟಿ ಆದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಸುನಿಲ್‌ ರನ್ನು ಮರಕ್ಕೆ ಕಟ್ಟಿ ಅವರ ಪತ್ನಿ, ಗ್ರಾಮಸ್ಥರು, ಮಹಿಳೆಯರು ಸೇರಿ ದೊಣ್ಣೆ ಮತ್ತು ಪೊರಕೆಯಿಂದ ಥಳಿಸಿದ್ದಾರೆ.

ಇದಾದ ನಂತರ ಗ್ರಾಮಸ್ಥರು ಮೌಖಿಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಸುನಿಲ್‌ ಜೊತೆಗೆ ಇದಕ್ಕೆ ಕಾರಣರಾದ ಮಹಿಳೆ(ಅತ್ತೆ) ಯ ವಿರುದ್ಧವೂ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

error: Content is protected !!