ನೇಸರ ಸೆ.17: ಜೆಸಿಐ ಆಲಂಕಾರು ಘಟಕಕ್ಕೆ ಜೆಸಿಐ ವಲಯಾಧ್ಯಕ್ಷರ ಅಧಿಕೃತ ಭೇಟಿಯು ಅಶ್ವಿತಾ ನಿಲಯ, ಕುಂತೂರಿನಲ್ಲಿ ನಡೆಯಿತು.
ಜೆಸಿಐ ವಲಯ 15ರ ಅಧ್ಯಕ್ಷ ಜೆಸಿಐ ಸೇನೆಟರ್ ರಾಯನ್ ಉದಯ್ ಕ್ರಾಸ್ತಾ ದಂಪತಿಗಳನ್ನು ಆಲಂಕಾರು ಪೇಟೆಯಿಂದ ಕುಂತೂರು ಅಶ್ವಿತಾ ನಿಲಯಕ್ಕೆ ತೆರೆದ ಜೀಪಿನಲ್ಲಿ, ಮೆರವಣಿಗೆಯ ಮೂಲಕ ಕರೆ ತರಲಾಯಿತು ಹೋಗಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಸಿಐ ಸೇನೆಟರ್ ರಾಯನ್ ಉದಯ್ ಕ್ರಾಸ್ತಾರವರು “ಜೆಸಿಐ ಆಲಂಕಾರು ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಇಡೀಯ ವರ್ಷ ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆಗೆ ಪಾತ್ರವಾಗಿದೆ. ಇವೆಲ್ಲದರ ಹಿಂದೆ ಜೆಸಿಐ ಆಲಂಕಾರಿನ ಅಧ್ಯಕ್ಷ ಜೆಸಿ ಅಜಿತ್ ರೈ ಮತ್ತು ಅವರ ಹಿಂದೆ ಇರುವ ಪೂರ್ವಾಧ್ಯಕ್ಷರ ತಂಡ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿರುವುದೇ ಮೂಲ ಕಾರಣ. ಈ ವರ್ಷದ ಚಟುವಟಿಕೆಗಳ ವರದಿಯೇ ಹೇಳುವಂತೆ ಅದ್ಭುತ ಕಾರ್ಯಕ್ರಮಗಳನ್ನು ಮಾಡಿದ ಜೆಸಿಐ ಆಲಂಕಾರು ಘಟಕಕ್ಕೆ ಅಭಿನಂದನೆಗಳು” ಎಂದು ಹೇಳಿ ಶುಭ ಹಾರೈಸಿದರು.
ಈ ವೇಳೆಯಲ್ಲಿ ಆಟಿಯ ತಿಂಗಳಿನ ಪ್ರಯುಕ್ತ ನಡೆದ ಅನ್ಲೈನ್ ಚಟುವಟಿಕೆಗಳ ಬಹುಮಾನ ವಿತರಣೆಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಲಯ 15ರ ಉಪಾಧ್ಯಕ್ಷ, ಜೆಸಿ ಪ್ರಶಾಂತ್ ಲಾಯಿಲ, ಸ್ಥಾಪಕಾಧ್ಯಕ್ಷ ಬಿ.ಎಲ್ ಜನಾರ್ದನ, ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಜೆಸಿಐ ಆಲಂಕಾರಿನ ಅಧ್ಯಕ್ಷ ಜೆಸಿ ಅಜಿತ್ ಕುಮಾರ್ ರೈ ವಹಿಸಿದ್ದರು. ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಮಂಡಿಸಿದರು.
ಅದಲ್ಲದೆ ಕುಂತೂರಿನ ಶಿಶುಮಂದಿರಕ್ಕೆ ಶಾಶ್ವತ ಯೋಜನೆಯ ಭಾಗವಾಗಿ, ನೀರಿನ ಟ್ಯಾಂಕಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಯಿತು. ಇದನ್ನು ಜೆಸಿಐನ ವಲಯ 15ರ ಅಧ್ಯಕ್ಷರಾದ ಜೆಸಿಐ ಸೇನೆಟರ್ ರಾಯನ್ ಉದಯ್ ಕ್ರಾಸ್ತಾ ಹಸ್ತಾಂತರ ಮಾಡಿದರು. ಈ ಸಂಧರ್ಭದಲ್ಲಿ ಶಿಶುಮಂದಿರದ ಆಡಳಿತ ಮಂಡಳಿಯವರು, ಪುಟಾಣಿ ಮಕ್ಕಳು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.