ನೇಸರ ಜು.02: ತಿಪಟೂರಿನ ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ದಕ್ಷಿಣ ಭಾರತೀಯ ಮೂರನೇ ಪ್ರಾಜೆಕ್ಟ್ ಎಕ್ಸಿಬಿಷನ್ ನಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಸಿವಿಲ್ ವಿಭಾಗ ಭಾಗವಹಿಸಿ ಪ್ರಸ್ತುತಪಡಿಸಿದ ತ್ಯಾಜ್ಯ ವಸ್ತು,ಪ್ಲಾಸ್ಟಿಕ್ ಮತ್ತು ಸಮುದ್ರ ಹೊಯಿಗೆಯಿಂದ ಸಿದ್ಧಪಡಿಸಿದ ಚಾವಣಿ ಹೆಂಚು ಪ್ರಾಜೆಕ್ಟ್ ತೃತೀಯ ಸ್ಥಾನ ಪಡೆದಿದೆ.
ಎಕ್ಸಿಬಿಷನ್ ನಲ್ಲಿ ದಕ್ಷಿಣ ಭಾರತದ 13 ಇಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದು, ವಿವಿಧ ತಾಂತ್ರಿಕ ವಲಯಗಳಿಂದ 75 ಪ್ರಾಜೆಕ್ಟ್ ಗಳು ಪಾಲ್ಗೊಂಡಿದ್ದವು. ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥೆ ತೃಪ್ತಿ ರತನ್ ರೈ ಅವರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳಾದ ಹೃತಿಕ್ ಲೋಯ್ಸ್ಟನ್ಸ್, ಕೌಶಿಕ್ ಅಡಿಗ ದುರ್ಗೇಶ್,ಮಹೇಶ್ ಬಾಬು ಸಿದ್ದಪಡಿಸಿದ ಈ ಪ್ರಾಜೆಕ್ಟ್ ತೃತೀಯ ಸ್ಥಾನವನ್ನು ಗಳಿಸಿತು.
ಪ್ರಾಚಾರ್ಯ ಸಂತೋಷ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.