ನೇಸರ ಜು.02: ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೆಂಜರ್ಸ್ ಘಟಕ ವತಿಯಿಂದ ಇಲ್ಲಿ ದಿನಾಂಕ 2.7.2022 ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕಡಬ ಘಟಕ, ಯುವ ರೆಡ್ ಕ್ರಾಸ್, ಮಂಗಳೂರು ವಿಶ್ವವಿದ್ಯಾನಿಲಯ, ಲಯನ್ಸ್ ಕ್ಲಬ್ ಕಡಬ, ಜೆಸಿಐ ಪಂಜ, ಪಂಚಶ್ರೀ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಗಾರ ಇದರ ಉದ್ಘಾಟನಾ ಸಮಾರಂಭವು ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅನಂತಶಂಕರ್ ಬಿ, ತಹಶೀಲ್ದಾರರು ಕಡಬ ತಾಲೂಕು ಇವರು ನೆರವೇರಿಸಿ ವಿಪತ್ತು ನಿರ್ವಹಣೆಯ ಅರಿವಿನ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾಧ್ಯಕ್ಷರಾದ LN ಗೋಪಾಲಕೃಷ್ಣ ಎ ಎಸ್., ವಹಿಸಿದ್ದರು. ವೇದಿಕೆಯಲ್ಲಿ LN ಕೆ ಎಸ್ ದಿನೇಶ್ ಆಚಾರ್ಯ ಅಧ್ಯಕ್ಷರು ಲಯನ್ಸ್ ಕ್ಲಬ್ ಕಡಬ, Rtn .ಗೋಪಾಲ್ ಎಣ್ಣೆಮಜಲು ಅಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ, ಜೇಸಿ ಶಿವಪ್ರಸಾದ್ ಹಾಳೆಮಜಲು ಅಧ್ಯಕ್ಷರು ಜೆಸಿಐ ಪಂಜ ಪಂಚಶ್ರೀ, Dr.ಗಣಪತಿ ಗೌಡ ನೋಡಲ್ ಅಧಿಕಾರಿ ಯು ಆರ್ ರೆಡ್ ಕ್ರಾಸ್ ಮಂಗಳೂರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜೇಸಿ ನಾಗರಾಜ್ ಎನ್ ಕೆ., ಅಧ್ಯಕ್ಷರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕಡಬ ಘಟಕ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನು ನುಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದಿನೇಶ್ ಪಿ ಟಿ., ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಆರತಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಇವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸವಿತಾರಾ ಮೂಡೂರು, ಕೃಷ್ಣಪ್ಪ ಪಂಬೀಲ, ಪುತ್ತೂರು ತಾಲೂಕು ಅಧ್ಯಕ್ಷರು, ಕೌಶಿಕ್ ಕುಳ ಜೆಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಶ್ರೀಮತಿ ಕೃತಿಕಾ, ಶ್ರೀಮತಿ ವನಿತಾ, ರೋವರ್ಸ್ ರೆಂಜರ್ಸ್ ಘಟಕದ ಸಂಯೋಜಕರಾದ ಪ್ರಮೀಳಾ, ಶ್ರೀಮತಿ ಅಶ್ವಿನಿ ಕಾರ್ಯಕ್ರಮಕ್ಕೆ ಸಹಕರಿಸಿದರು.
ಅಶ್ವಿನ್ ಕುಮಾರ್ ಎಂ, ಸದಸ್ಯರು ರಾಜ್ಯ ವಿಪತ್ತು ನಿರ್ವಹಣಾ ತಂಡ ಮಂಗಳೂರು ಇವರು ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆಯ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡರು. ಸುಮಾರು 75 ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು.