ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಪುಲ ಅವಕಾಶ – ಡಾ. ಸತೀಶ್ಚಂದ್ರ ಎಸ್.

ಶೇರ್ ಮಾಡಿ

ನೇಸರ ಜು.03: ಕರ್ನಾಟಕ ಸರಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನವಾಗಿದೆ. ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹೇಳಿದರು.
ಉಜಿರೆಯ ಎಸ್.ಡಿ.ಎಂ.ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ಬೋಧಕರ ಸಂಘ ಹಾಗೂ ವನಶ್ರೀ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಜರಗಿದ ಒಂದು ದಿನದ ಪಠ್ಯಕ್ರಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರ ಕುತೂಹಲ, ಉತ್ಸಾಹ ಹಾಗೂ ಸೃಜನಶೀಲತೆಗಳಿಗೆ ಪೂರಕ ಹಾಗೂ ಅನ್ವಯಿಕವೂ ಆದ ಕಲಿಕಾ ಕ್ರಮವನ್ನು ಪಠ್ಯದಲ್ಲಿ ಅಳವಡಿಸಲು ಮಾರ್ಗಸೂಚಿ ನೀಡಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ.ಜಯಕರ ಭಂಡಾರಿ, ಪಠ್ಯಕ್ರಮ ಬದಲಾವಣೆಯ ಪ್ರಸ್ತುತತೆ ಮತ್ತು ಅಗತ್ಯತೆಗಳನ್ನು ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವನಶ್ರೀ ಸಂಘಟನೆಯ ಅಧ್ಯಕ್ಷ ಡಾ.ಕುಮಾರ ಹೆಗ್ಡೆ ಅವರು ಕಾರ್ಯಾಗಾರದ ಆಶಯಗಳನ್ನು ಉಲ್ಲೇಖಿಸಿ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಬೆಳವಣಿಗೆಯಲ್ಲಿ ಪಠ್ಯಕ್ರಮದ ಬದಲಾವಣೆಯ ಮಹತ್ವವನ್ನು ವಿವರಿಸಿದರು.
ಪ್ರಿನ್ಸಿಪಾಲ್ ಡಾ.ಉದಯ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಗಣೇಶ್ ಶೆಂಡ್ಯೆ ಕಾರ್ಯಕ್ರಮ ನಿರ್ವಹಿಸಿದರು. ಡಾ.ವಿನಾಯಕ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!