ಜೇಸಿ ಮೋಹನ್ ಚಂದ್ರ ನೇತೃತ್ವದ ಉಪ್ಪಿನಂಗಡಿ ಜೇಸಿಐ ಘಟಕಕ್ಕೆ ವಲಯಾಭಿವೃದ್ಧಿ ಪ್ರಶಸ್ತಿ

ಶೇರ್ ಮಾಡಿ

ಜೇಸಿ 15ರ ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ ವಿಟ್ಲ ಘಟಕದ ಆತಿಥ್ಯದಲ್ಲಿ ನಡೆಯಿತು. ವಲಯಾಧ್ಯಕ್ಷ ಜೇಸಿ ರೋಯನ್ ಉದಯ ಕ್ರಾಸ್ತಾ ಸಮ್ಮೇಳನಕ್ಕೆ ಚಾಲನೆ ನೀಡಿದರು.
ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಪೊನ್ನರಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಠಲ್ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡಿದರು. ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಜೇಸಿ ಮರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ವಲಯದ ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಸೌಜನ್ಯ ಹೆಗ್ಡೆ, ಉಪಾಧ್ಯಕ್ಷರಾದ ಜೇಸಿ ದೀಪಕ್ ಗಂಗೂಲಿ, ಜೇಸಿ ಪ್ರಶಾಂತ್ ಲಾಯಿಲ, ಜೇಸಿ ಸ್ವಾತಿ ರೈ, ಜೇಸಿ ರವಿಚಂದ್ರ ಪಾಟಾಳಿ ಸೇರಿದಂತೆ ಇತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಲಯದಿಂದ ಕೊಡಮಾಡುವ ವಲಯಾಭಿವೃದ್ಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೇಸಿ ಉಪ್ಪಿನಂಗಡಿ ಘಟಕ ವಲಯಾಭಿವೃದ್ಧಿ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಯಿತು. ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಪ್ರಶಸ್ತಿ ಸ್ವೀಕರಿಸಿದರು. ಉಪಾಧ್ಯಕ್ಷರಾದ ಜೇಸಿ ಕುಶಾಲಪ್ಪ, ಕಾರ್ಯದರ್ಶಿ ಜೇಸಿ ಲವಿನಾ ಪಿಂಟೊ, ಕೋಶಾಧಿಕಾರಿ ಜೇಸಿ ಸುರೇಶ್, ಜೇಸಿ ಸದಸ್ಯರಾದ ಜೇಸಿ ದಿವಾಕರ ಶಾಂತಿನಗರ, ಜೇಸಿ ಪುರುಷೋತ್ತಮ ತೋಟದ ಮನೆ, ಮತ್ತು ಜೇಸಿ ಪುನೀತ್ ಮಂಜಿಪಲ್ಲ ಉಪಸ್ಥಿತರಿದ್ದರು.

Leave a Reply

error: Content is protected !!