ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರತಿಭಾ ಪುರಸ್ಕಾರ

ಶೇರ್ ಮಾಡಿ

ನೇಸರ ಜು.16: ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕ ರಕ್ಷಕ ಸಂಘದ ಸಭೆಯು ಸಂಸ್ಥೆಯ ಸಭಾ ಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಫಾ.ಜೇಮ್ಸ್ ಡಿಸೋಜಾ ಅನುಗ್ರಹ ಶಿಕ್ಷಣ ಸಂಸ್ಥೆ ಉತ್ತಮ ಗುಣ ಮಟ್ಟದ ಶಿಕ್ಷಣ, ಪಾಠೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಜತೆ ಮಕ್ಕಳ ಭವಿಷ್ಯ ರೂಪಿಸುತ್ತಿದೆ ಎಂದರು.
ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲ್ ವಿಜಯ್ ಲೋಬೋ ಮಾತನಾಡಿ ಮಕ್ಕಳ ಬಗ್ಗೆ ನಿರ್ಲಕ್ಷ ವಹಿಸದೆ ಅವರನ್ನು ಬೆಳೆಸುವುದು ಹೆತ್ತವರ ಕರ್ತವ್ಯ ಪ್ರೀತಿ ಮತ್ತು ಆತ್ಮೀಯತೆ ಮೂಲಕ ಮಕ್ಕಳ ಹೃದಯ ಗೆಲ್ಲಬೇಕು, ಅವರ ಶಕ್ತಿಯ ಬಗ್ಗೆ ಹೆತ್ತವರು ಯೋಚಿಸಿ ಅದಕ್ಕೆ ತಕ್ಕ ಶಿಕ್ಷಣ ನೀಡುವುದು ಸೂಕ್ತ ಎಂದರು.

ಡಾ.ಕ್ಯಾವಲಿನ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಆಂಟನಿ, ಸದಸ್ಯರಾದ ಪ್ರವೀಣ್ ಫೆರ್ನಾಂಡಿಸ್, ಅರುಣ್ ಲೋಬೋ, ಟೀನಾ ಮೆಮೋರಿಯಲ್ ಟ್ರಸ್ಟ್ ನ ಜಾರ್ಜ್ ಮಾಥ್ಯು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರವಿ ಕುಮಾರ್ ಸ್ವಾಗತಿಸಿದರು .ಶಿಕ್ಷಕ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿದರು.

Leave a Reply

error: Content is protected !!