ನೆಲ್ಯಾಡಿ : ಶ್ರೀರಾಮ ವಿದ್ಯಾಲಯದಲ್ಲಿ ವನಮಹೋತ್ಸವ

ಶೇರ್ ಮಾಡಿ

ನೇಸರ ಜು.16: ಶ್ರೀರಾಮ ವಿದ್ಯಾಲಯ ನೆಲ್ಯಾಡಿಯಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಘಟಕ ಇದರ ಸಹಯೋಗ ದೊಂದಿಗೆ ವನಮಹೋತ್ಸವ ವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ನೆಲ್ಯಾಡಿ ವ್ಯಾಪ್ತಿಯ ಅರಣ್ಯರಕ್ಷಕರಾದ ದೇವಿಪ್ರಸಾದ್ ಇವರು ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆಯ ಕುರಿತು, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ಜನರ ನಿರ್ಲಕ್ಷೆ ಕುರಿತು ಹಾಗೂ ವನಮಹೋತ್ಸವವು ಪ್ರದರ್ಶನಕ್ಕಾಗಿ ಮಾತ್ರ ಆಚರಿಸಲ್ಪಡದೆ ಅದರ ನಿಜವಾದ ಉದ್ದೇಶವು ಈಡೇರಲ್ಪಡಬೇಕು ಎಂದು ಹೇಳಿದರು. ವೈದ್ಯರಾದ ಡಾ.ಸದಾನಂದ ಕುಂದರ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ವೆಂಕಟ್ರಮಣ ಆರ್ ಇವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು. ಸಭೆಯಲ್ಲಿ ಆಡಳಿತ ಸಮಿತಿಯ ಸದಸ್ಯರಾದ ರವಿಚಂದ್ರ ಹೊಸವಕ್ಲು ಹಾಗೂ ಮುಖ್ಯ ಗುರುಗಳಾದ ಗಣೇಶ್ ವಾಗ್ಲೆ ಯವರು ಉಪಸ್ಥಿತರಿದ್ದರು.

ಗಣೇಶ್ ವಾಗ್ಲೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ವಾತಿ ಮಾತಾಜಿ ವಂದಿಸಿದರು. ಸೂರ್ಯ ಮಾತಾಜಿ ನಿರೂಪಿಸಿದರು.

Leave a Reply

error: Content is protected !!