ನೇಸರ ಜು.28: ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಮತ್ತು ಕಲಾ ಸಂಘ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.
ಕಾರ್ಗಿಲ್ ವಿಜಯ ದಿವಸ್ ಕುರಿತು ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಉಪನ್ಯಾಸ ನೀಡಿ, ಸೈನಿಕರ ತ್ಯಾಗ, ದೇಶ ಪ್ರೇಮ, ಶೌರ್ಯ, ಸಾಹಸ, ಪರಾಕ್ರಮಗಳು ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವರು ದೇಶದ ರಕ್ಷಣೆಯಲ್ಲಿ ನಿರ್ವಹಿಸಿದ ಜವಾಬ್ದಾರಿಗಳನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದರು.
ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಗೌರಿಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಮೋಹನ್ ಚಂದ್ರ ಪ್ರಸ್ತಾನೆಯೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಭಾಗ್ಯಶ್ರೀ ವಂದಿಸಿದರು. ಕುಮಾರಿ ರಚನಾ ಪ್ರಾರ್ಥಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಂದಿನಿ ಸಹಕರಿಸಿದರು. ಎನ್ಎಸ್ಎಸ್ ಮತ್ತು ಕಲಾ ಸಂಘ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.