ಯು ಸಿ ಪೌಲೋಸ್ ಗೆ ಅಭಿನಂದನಾ ಸಮಾರಂಭ

ಶೇರ್ ಮಾಡಿ

ನೇಸರ ಜು.31: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಸಂಸ್ಥೆಯ ಮುಖ್ಯಸ್ಥರಾಗಿರುವ ಯು.ಸಿ.ಪೌಲೋಸ್ ಅವರಿಗೆ ಕೆನಡಾದ ರಿಜೆನ್ಸಿ ಥಿಯಲಾಜಿಕಲ್ ಸಂಸ್ಥೆಯವರು ಸಾಮಾಜಿಕ ಕಾರ್ಯಕ್ರಮ ಗಳಿಗಾಗಿ ನೀಡುವ ಗೌರವ ಡಾಕ್ಟರೇಟ್ ಪದವಿಯನ್ನು ಇತ್ತೀಚೆಗೆ ನೀಡಿದ್ದಾರೆ.
ಪ್ರಸ್ತುತ ಪ್ರಶಸ್ತಿ ಪುರಸ್ಕೃತ ರನ್ನು ಗಂಡಿಬಾಗಿಲಿನ ಸಂತ ಥಾಮಸ್ ಚರ್ಚಿನ ನಾನಾ ಸಂಘಟನೆಗಳ ಪರವಾಗಿ ಅಭಿನಂದಿಸಲಾಯಿತು. ಬೆಳ್ತಂಗಡಿ ತಾಲೂಕಿನ ಈ ಗುಡ್ಡಗಾಡು, ಹಿಂದುಳಿದ ಪ್ರದೇಶವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತಾಗಿರುವುದು ಈ ಸಿಯೋನ್ ಸಂಸ್ಥೆಯಿಂದ ಮತ್ತು ಯು.ಸಿ.ಪೌಲೋಸ್ ಅವರಿಂದ ಎಂದು ಚರ್ಚಿನ ಧರ್ಮಗುರು ಹಾಗೂ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ನಿರ್ದೇಶಕರು ಆಗಿರುವ ಫಾ.ಷಾಜಿ ಮಾಥ್ಯು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌಲೋಸ್ ಅವರು ಸ್ವಂತ ನೆಲದ ಪುರಸ್ಕಾರ ಎಲ್ಲಾ ಪುರಸ್ಕಾರಗಳಿಗಿಂತಲೂ ಶ್ರೇಷ್ಠ ಎಂದರು. ಚರ್ಚಿನ ಟ್ರಸ್ಟಿಗಳಾದ ಸೆಬಾಸ್ಟಿನ್ ಎಂ ಜೆ, ಆಗಸ್ಟಿನ್, ಮಾಥ್ಯೂ ಪಿ.ಜೆ ಬೇಬಿ ಸಿ.ಎ, ಕೆ.ಎಸ್.ಎಂ.ಸಿ.ಎ.ಅಧ್ಯಕ್ಷ ಬೇಬಿ ವಿ.ಟಿ, ವಿನ್ಸೆಂಟ್ ಡಿ. ಪೌಲ್, ಸೊಸೈಟಿಯ ಚಾಂಡಿ ಸಿ.ವಿ, ಮಹಿಳಾ ಸಂಘದ ಶೈಬಿ ಮನೋಜ್, ಪಿತೃ ಸಂಘದ ಜೋಸೆಪ್ ಎನ್.ಜೆ, ಸಿಸ್ಟರ್ ಡೀನಿ, ಔಸ್ಟಿನ್ ಶಿಜು, ಆಡ್ರಿನ್ ಮನೋಜ್, ಅಂಜುಷಾ ಟಿ.ಎ. ಮೊದಲಾದವರು ಉಪಸ್ಥಿತರಿದ್ದರು. ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯ ಶಿಜು ಸಿ.ವಿ. ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!