125 ಕಿ.ಮೀ. ಪ್ರಯಾಣಿಸಿ ಬೂಸ್ಟರ್ ಲಸಿಕೆ, ಆರೋಗ್ಯ ತಪಾಸಣೆ ನಡೆಸಿದ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ

ಶೇರ್ ಮಾಡಿ

ನೇಸರ ಆ.13: ತಾಲೂಕು ಕೇಂದ್ರದಿಂದ ಸುಮಾರು 125 ಕಿ.ಮೀ. ದೂರದಲ್ಲಿರುವ ಎಳನೀರು ಪ್ರದೇಶದಲ್ಲಿ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬೂಸ್ಟರ್ ಡೋಸ್ ಲಸಿಕೆ ಶಿಬಿರ, ಆರೋಗ್ಯ ತಪಾಸಣೆ ಡೆಂಗೆ ಹಾಗೂ ಕ್ಷಯರೋಗದ ಕುರಿತು ಮಾಹಿತಿ ಕಾರ್ಯಕ್ರಮ ಶುಕ್ರವಾರ ಜರಗಿತು.

86 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದರು. ಪ್ರದೇಶದ ಗುತ್ಯಡ್ಕ ಶಾಲೆ, ಅಂಗನವಾಡಿ ಮಕ್ಕಳ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಲಾಯಿತು.
ರಾಷ್ಟ್ರೀಯ ಬಾಲ ಸ್ವಾಸ್ಯ ಕಾರ್ಯಕ್ರಮದ ಡಾ.ಸೋನಾ, ಡಾ.ಸುಮನಾ, ಹಿರಿಯ ಆರೋಗ್ಯ ಸಹಾಯಕಿ ಭಾರತಿ, ಕಿರಿಯ ಆರೋಗ್ಯ ಸಹಾಯಕಿಯರಾದ ರೂಪಲತಾ, ಜಯಶ್ರೀ ಭಾಗವಹಿಸಿದ್ದರು. ಮಲವಂತಿಗೆ ಗ್ರಾಪಂ ಸದಸ್ಯ ಪ್ರಕಾಶ್ ಜೈನ್ ಎಳನೀರು ಸಹಕರಿಸಿದರು.

NESARA|| WhatsApp ||GROUPS

                             

 

                                                       

 

250 ಕಿಮೀ:
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಪಂ ವ್ಯಾಪ್ತಿಯ ಎಳನೀರು ಪ್ರದೇಶವು ಚಿಕ್ಕಮಗಳೂರು ಜಿಲ್ಲೆಯ ಕಳಸಕ್ಕೆ ತೀರಾ ಹತ್ತಿರದಲ್ಲಿ ಇದ್ದರೂ ಇದು ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದೆ. ಮುಂಡಾಜೆಯಿಂದ ಬೆಳ್ತಂಗಡಿ-ಬಜಗೋಳಿ- ಎಸ್ ಕೆ ಬಾರ್ಡರ್ ಮೂಲಕ ಹೋಗಿ ಬರಲು 250 ಕ್ಕಿಂತ ಅಧಿಕ ಕಿಮೀ. ಪ್ರಯಾಣಿಸಬೇಕು. ಬೆಳಿಗ್ಗೆ 7 ಗಂಟೆಗೆ ಹೊರಟ ಆರೋಗ್ಯ ಕಾರ್ಯಕರ್ತರ ತಂಡವು ರಾತ್ರಿ ಹತ್ತರ ಸುಮಾರಿಗೆ ಹಿಂದಿರುಗಿತು.

ಅಭಿವೃದ್ಧಿ ವಿಚಾರದಲ್ಲಿ ಎಳನೀರು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ 600ಕ್ಕಿಂತ ಅಧಿಕ ಜನಸಂಖ್ಯೆ ಇದೆ. ಇಲ್ಲಿನ ಜನರು ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದ ಕಾರಣ ಇಲ್ಲಿ ಇದುವರೆಗೆ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗದಿರುವುದು ಮಾದರಿಯಾಗಿದೆ.

Leave a Reply

error: Content is protected !!