ನೇಸರ ಆ.25: ಆನ್ ಲೈನ್ ಔಷಧ ವ್ಯಾಪಾರ, ಹೊರ ರಾಜ್ಯಗಳ ಚೈನ್ ಔಷಧಿ ಅಂಗಡಿ, ಆನ್ ಲೈನ್ ಮೂಲಕ ಯಾವುದೇ ನಿಯಂತ್ರಣವಿಲ್ಲದೆ ಔಷಧ ಮಾರಾಟವಾಗುತ್ತಿದ್ದು ಇದರಿಂದ ಜಿಲ್ಲೆಯಲ್ಲಿ ಸ್ಥಳೀಯ ಸುಮಾರು ಹತ್ತು ಸಾವಿರಕ್ಕಿಂತ ಅಧಿಕ ಔಷಧ ವ್ಯಾಪಾರಿ ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ ತೀವ್ರ ತೊಂದರೆ ಉಂಟಾಗಿದೆ. ಈ ಕಾರಣದಿಂದ ನಿಯಂತ್ರಣ ಇಲ್ಲದ ಔಷಧ ಮಾರಾಟದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಸಾಂಪ್ರದಾಯಿಕ ಔಷಧ ವ್ಯಾಪಾರಸ್ಥರಿಗೆ ಉಂಟಾಗುತ್ತಿರುವ ತೊಂದರೆ ಬಗ್ಗೆ ಶೀಘ್ರ ಗಮನಹರಿಸಿ ಕ್ರಮ ಕೈಗೊಳ್ಳುವ ಕುರಿತು ದ.ಕ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಜಿತ್ ಭಿಡೆ, ಸಲಹೆಗಾರ ಮನೋಹರ ಶೆಟ್ಟಿ, ಉಪಾಧ್ಯಕ್ಷ ಸುನಿಲ್ ನಾಯಕ್, ಕಾರ್ಯದರ್ಶಿ ಗುರು ಚರಣ್ ರಾವ್, ಖಜಾಂಜಿ ವಿನಯ ರೈ, ಸದಸ್ಯರಾದ ಎ.ಕೆ.ಜಮಾಲ್, ಪ್ರಶಾಂತ್,ಶ್ರೀನಿವಾಸ್ ಭಟ್,ಶರತ್ ಆಳ್ವ, ಚಂದ್ರಶೇಖರ ಭಟ್ ಹಾಗೂ ಅಮೃತ್ ರೈ ಉಪಸ್ಥಿತರಿದ್ದರು.