ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಾಖಲೆಯ ಸಾಧನೆ ➤ ಎಸ್.ಉಮೇಶ್ ಶೆಟ್ಟಿ

ಶೇರ್ ಮಾಡಿ

  • ದಾಖಲೆಯ 1 ಕೋಟಿ 24 ಲಕ್ಷ ಲಾಭ
  • ಸದಸ್ಯರಿಗೆ ಶೇ.9.5 ಲಾಭಾಂಶ ವಿತರಣೆ
  • ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ನೇಸರ ಆ.25:ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವರದಿ ವರ್ಷದಲ್ಲಿ ದಾಖಲೆಯ 1 ಕೋಟಿ 24 ಲಕ್ಷ ಲಾಭಗಳಿಸಿ ಉತ್ತಮ ಸಾಧನೆ ಮಾಡಿದ್ದು ಸದಸ್ಯರಿಗೆ ಶೇ.9.5 ಲಾಭಾಂಶ ವಿತರಣೆ ಮಾಡುವುದೆಂದು ಸಂಘದ ಅಧ್ಯಕ್ಷರು ಮಹಾಸಭೆಯಲ್ಲಿ ಘೋಷಿಸಿದರು.
ಮಹಾಸಭೆಯು ಆ.13ರಂದು ಸಂಘದ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಸ್.ಉಮೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಎಂ.ದಯಾಕರ.ರೈ ಯವರು ವರದಿ ಮಂಡಿಸಿ, ಸಂಘವು 25 ಕೋಟಿ 87 ಲಕ್ಷ ಠೇವಣಿ ಹೊಂದಿದ್ದು. ರೂ.6 ಕೋಟಿ 86 ಪಾಲು ಬಂಡವಾಳ ರೂ.64 ಕೋಟಿ 89 ಲಕ್ಷ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ.99.54% ಸಾಲ ಮರುಪಾವತಿಯಾಗಿರುತ್ತದೆ. ವರದಿ ಸಾಲಿನಲ್ಲಿ ದಾಖಲೆಯ 1 ಕೋಟಿ 24 ಲಕ್ಷ ಲಾಭಗಳಿಸಿ ಸಂಘ ಅದ್ವಿತೀಯ ಸಾಧನೆ ಮಾಡಿದೆ. 2022-23ನೇ ಸಾಲಿನ ಆಡಿಟ್ ನಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿರುವ ಅವರು ಸದಸ್ಯರ ಸಂಖ್ಯೆಯನ್ನು 5868 ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸಹಕಾರಿ ಬ್ಯಾಂಕಿನಿಂದ 47 ಕೋಟಿ 65 ಲಕ್ಷ ಸಾಲ ಪಡೆದುಕೊಂಡಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕಮಲಾಕ್ಷ ಗೌಡ, ನಿರ್ದೇಶಕರಾದ ಜಯಾನಂದ ಪಿ, ಬಾಲಕೃಷ್ಣ ಬಿ, ಸರ್ವೋತ್ತಮ ಗೌಡ, ಪ್ರಶಾಂತ ರೈ, ಸುದರ್ಶನ್, ಶ್ರೀಮತಿ ಉಷಾ ಅಂಚನ್, ಶ್ರೀಮತಿ ಸುಲೋಚನಾ ಡಿ, ಅಣ್ಣು ಬಿ, ಶ್ರೀಮತಿ ಸುಮಿತ್ರಾ, ಗುರುರಾಜ ಭಟ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ ಎಸ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಸ್ ಉಮೇಶ ಶೆಟ್ಟಿ ಸ್ವಾಗತಿಸಿ. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಘದ ಸದಸ್ಯ ಬಾಲಕೃಷ್ಣ ಬಿ ವಂದನಾರ್ಪಣೆಗೈದರು. ಕೃಷಿ ಅಧಿಕಾರಿ ಭಮ್ಮಣ್ಣವರ, ಕ್ಯಾಂಪ್ಕೋ ಅಧಿಕಾರಿ ಜನಾರ್ದನ ಇಲಾಖೆಯ ಬಗ್ಗೆ ಸದಸ್ಯರುಗಳಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಜಯಾನಂದ ಬಂಟ್ರಿಯಲ್ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಮ್ಯಾನೇಜರ್ ಪಿ.ಜೆ ಸೆಬಾಸ್ಟಿನ್, ಪಿ ರತ್ನಾಕರ, ರಮೇಶ ನಾಯ್ಕ, ಗುಮಾಸ್ತರಾದ ಎಂ.ಟಿ ಮಹೇಶ, ಅನೀಶ್ ಕೆ ಜೆ, ಸಂದೀಪ್ ಕುಮಾರ್, ಅಶೋಕ್ ಎಸ್, ಮುಕುಂದ ಪ್ರಸಾದ್ ಎಸ್, ರೋಷನ್ ಕುಮಾರ್ ಬಿ.ಜೆ, ಕೆ.ಪದ್ಮಶೆಟ್ಟಿ, ನಾಗೇಶ, ತಾರಾನಾಥ, ಪ್ರಮೋದ್, ಪಿಗ್ಮಿ ಸಂಗ್ರಹಕ ಕೆ ರಘುನಾಥ ವಿವಿಧ ಕಾರ್ಯನಿರ್ವಹಿಸಿದರು. ಸದಸ್ಯರಾದ ಶಿವಪ್ರಸಾದ್ ವಕೀಲರು, ಜನಾರ್ದನ, ಇಸ್ಮಾಯಿಲ್ ಅಡ್ವಕೇಟ್, ಕುಶಾಲಪ್ಪ ಗೌಡ, ರತ್ನಾಕರ ಕೊಲ್ಯೊಟ್ಟು, ಗಂಗಾಧರ ಶೆಟ್ಟಿ ಅವರು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿ ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ:

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು
ಎಸ್ ಎಸ್ ಎಲ್ ಸಿ ವಿಭಾಗ:
ಆದರ್ಶ ಶೆಟ್ಟಿ(519), ದಿವ್ಯ ಮೋಹನ್ ಪಿ (523), ಕೀರ್ತಿ ಪಿ(528), ದೀಪ್ತಿ ಡಿ.ಎಸ್ (533), ದೀಪ್ತಿ ಮೋಹನ್ ಪಿ(539), ಲಿಖಿತ(548), ಕೀರ್ತನ ವಿ ಎಸ್(562), ಅನ್ವಿಲ್ ಬಿಜು ಜಾನ್(581), ಹಿತೇಶ್ ಆರ್ ಶೆಟ್ಟಿ(585), ರಕ್ಷಿತಾ ಎನ್(600), ಶ್ರೀರಕ್ಷಾ(607), ಸಂಹಿತ ಬಿ.ಎ(611), ಆನ್ ಮರಿಯಾ ಜೋಸೆಫ್(617)

ಪಿಯುಸಿ ವಿಭಾಗ :
ರಕ್ಷಾ(570), ದೀಕ್ಷಾ.ಡಿ(582), ಲೀನಾ ಕೆ ರಂಜನ್(573), ಶ್ರೇಯ ಸಂತೋಷ್(583), ಕಾವ್ಯ(554), ಭವಿಷ್ಯ ಜೆ.ಕೆ(565) ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಸನ್ಮಾನ:
ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ರಕ್ಷಾ ಅಂಚನ್, ಆದರ್ಶ್ ಶೆಟ್ಟಿ ಅವರಿಗೆ ಸನ್ಮಾನಿಸಲಾಯಿತು.

ಸಂಘದ ಮುಂದಿನ ಯೋಜನೆ :

  • ಪಾಲು ಬಂಡವಾಳವನ್ನು ರೂ.710 ಲಕ್ಷಕ್ಕೆ ಹೆಚ್ಚಿಸುವುದು.
  • ಠೇವಣಿಯನ್ನು ರೂ.2.700 ಲಕ್ಷಕ್ಕೆ ಹೆಚ್ಚಿಸುವುದು.
  • ಸ್ವಂತ ಬಂಡವಾಳದಿಂದ ಕೃಷಿಯೇತರ ಉದ್ದೇಶಗಳಿಗೆ ಹೆಚ್ಚು ಸಾಲ ಕೊಡುವ ಮೂಲಕ ಹೊರಬಾಕಿ ಸಾಲವನ್ನು ರೂ 6600 ಲಕ್ಷಕ್ಕೆ ಹೆಚ್ಚಿಸುವುದು.
  • ಸಂಘದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕುಟುಂಬದ ಒಬ್ಬ ವ್ಯಕ್ತಿಯನ್ನು ಸಂಘದ ಸದಸ್ಯನನ್ನಾಗಿ ಸೇರಿಸಿಕೊಳ್ಳುವಂತೆ ಪ್ರೇರೇಪಿಸುವುದು.
  • ಅಡಿಕೆ ಮತ್ತು ಕಾಳು ಮೆಣಸುಗಳಿಗೆ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅಳವಡಿಸಿಕೊಳ್ಳುವುದು.
    ಸಂಘದ ಎಲ್ಲಾ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕರ್ಯನಿರ್ವಹಿಸುವಂತೆ ಮಾಡಲು ಪ್ರಯತ್ನಿಸುವುದು.

ಪ್ರಶಸ್ತಿ :
ಸಂಘಕ್ಕೆ ಸತತ ನಾಲ್ಕು ವರ್ಷಗಳಿಂದ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ. 2020 ರಲ್ಲಿ ಮಂಗಳೂರಿನಲ್ಲಿ ನಡೆದ ಸಹಕಾರಿ ಸಪ್ತಾಹದಲ್ಲಿ ಜಿಲ್ಲಾಮಟ್ಟದಲ್ಲೇ ಉತ್ತಮ ಕೃಷಿಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.

Leave a Reply

error: Content is protected !!