ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದ ಮೂರು ವರ್ಷದ ಪೋರಿ

ಶೇರ್ ಮಾಡಿ

ನೇಸರ ಆ.26: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುಳ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಇವಳ ವಯಸ್ಸು 3ವರ್ಷ, 8ತಿಂಗಳು. ಅತೀ ಕಿರಿಯ ವಯಸ್ಸಿನಲ್ಲಿ ಈಕೆ 35 ಹಣ್ಣುಗಳ, 16 ಬಣ್ಣಗಳ, ಹೆಸರನ್ನು ಗುರುತಿಸಿರುತ್ತಾಳೆ. 2 ಶ್ಲೋಕ, 4 Rhymes, ದೇಹದ 20 ಅಂಗಗಳ ಹೆಸರುಗಳನ್ನು ಗುರುತಿಸಿ 8 ರಾಷ್ಟ್ರಲಾಂಛನವನ್ನು ಗುರುತಿಸಿದ ಸಾಧನೆ ಈಕೆಯದು. ಅನ್ವಿಕಾ ಪ್ರಭು ಪುತ್ತೂರು ಕೋಡಿಂಬಾಡಿಯ ನಿವಾಸಿ ಅಶೋಕ್ ಪ್ರಭು.ಡಿ.ಕೆ ಹಾಗೂ ಶ್ವೇತಾ ಪ್ರಭು ಇವರ ಪುತ್ರಿ.
3ವರ್ಷ 8ತಿಂಗಳ ಅತಿ ಕಿರಿಯ ವಯಸ್ಸಿನಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಈಕೆಯ ಹೆಸರು ದಾಖಲೆಯಾಗಿದೆ ಹಾಗೂ ನಮ್ಮ ಶಾಲೆಯ ಇತಿಹಾಸದಲ್ಲಿ ಇದೊಂದು ವಿಶಿಷ್ಠ ಸಾಧನೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!