ನೆಲ್ಯಾಡಿ: ವ್ಯಕ್ತಿ ಆತ್ಮಹತ್ಯೆ

ಶೇರ್ ಮಾಡಿ

ನೇಸರ ಆ.26: ನೆಲ್ಯಾಡಿಯ ವ್ಯಕ್ತಿಯೊಬ್ಬರು ಕೊಕ್ಕಡದ ಪತ್ನಿಯ ತವರು ಮನೆಯಲ್ಲಿ ವಿಷ ಪಧಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 25ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ನೆಲ್ಯಾಡಿಯ ಮಾದೇರಿ ಸಮೀಪದ ಫಲಸ್ತಡ್ಕ ನಿವಾಸಿ ವಸಂತ ಮಡಿವಾಳ (44)ಎಂದು ಗುರುತಿಸಲಾಗಿದೆ.
ವಸಂತ ರವರ ಪತ್ನಿ ಮನೆ ಕೊಕ್ಕಡ ವಾಗಿದ್ದು ಅಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಾಯಿ ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದು ದೇವಳವೊಂದರಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಪರೀತ ಕುಡಿತದ ಚಟವಿದ್ದ ಇವರು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.

Leave a Reply

error: Content is protected !!