SSLC ವಾರ್ಷಿಕ ಪರೀಕ್ಷೆಗೆ ಬೋಧಿಸಬೇಕಾದ ಶೇ.80 ಪಠ್ಯಕ್ರಮ ಮಾಹಿತಿ ಪ್ರಕಟ

ಶೇರ್ ಮಾಡಿ

ನೇಸರ ಡಿ03: ಕೊರೊನಾ ಕಾರಣ ಶೇಕಡ.20 ರಷ್ಟು ಎಸ್‌ಎಸ್‌ಎಲ್‌ಸಿ ಪಠ್ಯಕ್ರಮವನ್ನು ಕಡಿತ ಮಾಡಿದ ನಂತರ ಬಿಡುಗಡೆ ಮಾಡಲಾದ ಪಠ್ಯಕ್ರಮವನ್ನು ಇದೀಗ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು,ಶಿಕ್ಷಕರು ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ.


ಹೈಲೈಟ್ಸ್‌:
ಎಸ್‌ಎಸ್‌ಎಲ್‌ಸಿ ಶೇ.80 ವಾರ್ಷಿಕ ಪರೀಕ್ಷೆ ಪಠ್ಯಕ್ರಮ ಬಿಡುಗಡೆ.
24 ವಿಷಯಗಳ ಪಠ್ಯಕ್ರಮವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.ವೆಬ್‌ಸೈಟ್‌ ವಿಳಾಸ: http://dsert.kar.nic.in/kindex.asp


ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊರೊನಾ ಹಿನ್ನೆಲೆ ಎಲ್ಲ ಪಠ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸಲು ಸಮಸ್ಯೆ ಎದುರಾಗುತ್ತಿದ್ದ ಕಾರಣ, ಶೇಕಡ.20 ಪಠ್ಯಕ್ರಮ ಕಡಿತ ಮಾಡಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಇದೀಗ ಪಠ್ಯಕ್ರಮ ಕಡಿತ ಮಾಡಿದ ಮಾಹಿತಿಯನ್ನು ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಯಾವ ಪಠ್ಯವನ್ನು ಪರಿಗಣಿಸಬಹುದು ಮತ್ತು ಯಾವ ಪಠ್ಯವನ್ನು ಪರಿಗಣಿಸಬಾರದು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪಟ್ಟಿ ಮಾಡಿ ಬಿಡುಗಡೆ ಮಾಡಿದೆ. ಈ ವರ್ಷ ಪರೀಕ್ಷೆಗೆ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪಠ್ಯದಲ್ಲಿ ಶೇಕಡ.80 ರಷ್ಟನ್ನು ಬೋಧನೆ ಮಾಡಲಿದ್ದು, ಯಾವ ಪಠ್ಯವನ್ನು ಬೋಧನೆ ಮಾಡಬೇಕೆಂಬ ನಿಖರತೆಯೂ ಅವರಿಗೆ ಸಿಕ್ಕಿದೆ.
ಶಿಕ್ಷಕರು ಈಗಾಗಲೇ ಬೋಧನೆ ಮಾಡಿರುವ ಸಿಲ್ಲಾಬಸ್ ಹೊರತುಪಡಿಸಿ ಡಿಸೆಂಬರ್ -ಮಾರ್ಚ್‌ ಅವಧಿಯಲ್ಲಿ ಬೋಧನೆ ಮಾಡಬೇಕಿರುವ ಅಧ್ಯಾಯಗಳನ್ನು ತೆಗೆಯಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ತಡವಾಗಿ ಆರಂಭವಾಗಿದೆ. ಈ ಎಲ್ಲ ಅಂಶಗಳಿಗೆ ಶಿಕ್ಷಕರಿಗೆ ಬೋಧನಾ ಅವಧಿ ಕಡಿಮೆಯಾಗಿದೆ. ಈ ಅವಧಿಯಲ್ಲಿ ಲಭ್ಯ ಇರುವ ಪಠ್ಯಕ್ರಮವನ್ನು ಬೋಧನೆ ಮಾಡುವುದು ಕಷ್ಟ ಎಂಬ ಅಭಿಪ್ರಾಯಗಳು ಶಿಕ್ಷಕರಿಂದ ಕೇಳಿ ಬಂದಿತ್ತು. ಅಲ್ಲದೇ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು.ಈ ಹಿನ್ನೆಲೆಯಲ್ಲಿ ಪಠ್ಯಕ್ರಮ ಕಡಿತ ಮಾಡಲಾಗಿದೆ.
ಪ್ರಸ್ತುತ ಲಭ್ಯ ಅವಧಿ, ಕಲಿಕೆಯ ಒತ್ತಡವನ್ನು ಗಮನದಲ್ಲಿಟ್ಟುಕೊಂಡು 2021-22ನೇ ಸಾಲಿಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಕೆಲವು ಪಠ್ಯಾಂಶಗಳನ್ನು ಪರಿಗಣಿಸಲು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಂತೆ ಮಾರ್ಚ್‌ 2022 ರ ವರೆಗೆ ಲಭ್ಯವಿರುವ ಅವಧಿಯನ್ನು ಗಮನದಲ್ಲಿರಿಸಿ, ಪರಿಶೀಲಿಸಿ ಕಡಿತ ಮಾಡಿರುವ ಪಠ್ಯದ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ http://dsert.kar.nic.in ನಲ್ಲಿ ಪ್ರಕಟಿಸಲಾಗಿದೆ. ಶಿಕ್ಷಕರು ಆ ಪ್ರಕಾರ ಬೋಧನೆ ಮಾಡುವಂತೆ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಶಿಕ್ಷಕರಿಗೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ವರ್ಷದ ವಾರ್ಷಿಕ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಕ್ರಮವನ್ನು ವೆಬ್‌ಸೈಟ್‌ http://dsert.kar.nic.in ನಲ್ಲಿ ನೀಡಲಾಗಿದೆ. ಒಟ್ಟು 24 ವಿಷಯಗಳ ಪಠ್ಯಕ್ರಮವನ್ನು ಅಪ್‌ಡೇಟ್‌ ಮಾಡಲಾಗಿತ್ತು, ವಿಷಯವಾರು ಚೆಕ್‌ ಮಾಡಿಕೊಳ್ಳಬಹುದು.

Leave a Reply

error: Content is protected !!