ಪಿಯು ಪಾಸಾದವರಿಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ: ಅರ್ಜಿ ಆಹ್ವಾನ

ಶೇರ್ ಮಾಡಿ

ನೇಸರ ಡಿ3: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಶಾಲೆಗಳಲ್ಲಿ, ದ್ವಿತೀಯ ಪಿಯು ಆದ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಅರ್ಜಿ ಆಹ್ವಾನಿಸಲಾಗಿದೆ.


ಹೈಲೈಟ್ಸ್‌:
ಜೂನಿಯರ್ ಹೆಲ್ತ್‌ ಅಸಿಸ್ಟಂಟ್‌ ತರಬೇತಿಗೆ ಅರ್ಜಿ ಆಹ್ವಾನ.
ದ್ವಿತೀಯ ಪಿಯು ಆದವರು ಅರ್ಜಿ ಹಾಕಿ.
ಅರ್ಜಿಗೆ ಡಿ.10 ಕೊನೆ ದಿನ.

ಕರ್ನಾಟಕದ ಎಲ್ಲ ಜಿಲ್ಲಾ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಶಾಲೆಗಳಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಅವಧಿ 24 ತಿಂಗಳು ಇರುತ್ತದೆ. ಕನಿಷ್ಠ 17 ವರ್ಷ ಪೂರೈಸಿದ, ಗರಿಷ್ಠ 30 ವರ್ಷ ವಯೋಮಿತಿ ಮೀರದ, ದ್ವಿತೀಯ ಪಿಯುಸಿ ಪಾಸಾದ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಮಹಿಳಾ ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿದ್ದು, ಕನಿಷ್ಠ 5 ವರ್ಷ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಅರ್ಜಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಭತ್ರಿ ಮಾಡಿ ಸಲ್ಲಿಸಬೇಕು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ ವಿಳಾಸ : www.karhfw.gov.in
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗೆ ಒಟ್ಟು 30 ಅಭ್ಯರ್ಥಿಗಳನ್ನು ರೋಸ್ಟರ್‌ ಮತ್ತು ಮೆರಿಟ್‌ ಆಧಾರದ ಮೇಲೆ ಆಯಾ ಜಿಲ್ಲೆಯ ತರಬೇತಿ ಶಾಲೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಆಡಳಿತ ಭವನ ಇಲ್ಲಿದೆ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-12-2021 ರ ಸಂಜೆ 05-30 ಗಂಟೆ ವರೆಗೆ.

Leave a Reply

error: Content is protected !!