ನೇಸರ ಡಿ03: ದೀಪೋತ್ಸವಕ್ಕೆ ಬರೋ ಭಕ್ತರನ್ನ ಆಕರ್ಷಿಸೋ ಉದ್ದೇಶದಿಂದ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನ ಆಕರ್ಷಿಸುತ್ತಿದೆ. ಪ್ರತಿ ನಿತ್ಯ ರಾತ್ರಿ ಬಲಿ ಪೂಜೆ ನಡೆಯೋ ಮೂಲಕ ಮಂಜುನಾಥ ಸ್ವಾಮಿಗೆ ರಾತ್ರಿಯ ವಿಶೇಷ ಪೂಜೆ ನೆರವೇರಿಸಲಾಗುತ್ತೆ.
ಧರ್ಮಸ್ಥಳ.. ಈ ಹೆಸರು ಕೇಳಿದರೆ ಸಾಕು ಕೋಟ್ಯಂತರ ಭಕ್ತ ಸಮುದಾಯ ಪುಳಕಿತರಾಗುತ್ತಾರೆ. ಮಂಜುನಾಥ ಸ್ವಾಮಿಯ ಮಹಿಮೆಯೇ ಅಂಥಾದ್ದು.. ಭಕ್ತಿಯಿಂದ ಕೈ ಮುಗಿದು ಆರಾಧಿಸೋಕೆ ಅಂತಾನೆ ರಾಜ್ಯ, ದೇಶ, ವಿದೇಶಗಳ ಕೋಟ್ಯಂತರ ಜನ ಭಕ್ತರು ಧರ್ಮಸ್ಥಳಕ್ಕೆ ಭೇಟಿ ಕೊಡ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರೋ ಶ್ರೀಕ್ಷೇತ್ರ ಧರ್ಮಸ್ಥಳ, ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನ ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ.
ಇಂತಹ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಲಕ್ಷ ದೀಪೋತ್ಸವದ ಸಂಭ್ರಮ ಆರಂಭವಾಗಿದೆ. ಈ ದೀಪೋತ್ಸವ ಸಂಭ್ರಮದ ಅಂಗವಾಗಿ ಸರ್ವ ಧರ್ಮ ಸಮ್ಮೇಳನ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಉದ್ಘಾಟಿಸಿದರು,
ಈ ಮೂಲಕ ಮಂಜುನಾಥನ ಕ್ಷೇತ್ರ ಸರ್ವ ಧರ್ಮ ಸಂದೇಶ ಸಾರೋದಕ್ಕೂ ಸಾಕ್ಷಿಯಾಗಲಿದೆ. ಇನ್ನು ಎರಡು ದಿನಗಳ ಹಿಂದೆ ಆರಂಭವಾಗಿರೋ ದೀಪೋತ್ಸವ ಇನ್ನೆರೆಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಪ್ರತಿ ನಿತ್ಯವೂ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಗಳು ನಡೀತಾ ಇದ್ದು, ಎಂದಿಗಿಂತಲೂ ಎರಡು ಪಟ್ಟು ಹೆಚ್ಚಿನ ಭಕ್ತ ಸಮೂಹ ಕ್ಷೇತ್ರದತ್ತ ಧಾವಿಸ್ತಿದೆ. ಈ ಮಧ್ಯೆ ವಸ್ತು ಪ್ರದರ್ಶನ ಸೇರಿದಂತೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಕ್ಷೇತ್ರದಲ್ಲಿ ನಡೆಯುತ್ತಿದೆ.
ಇನ್ನು ದೀಪೋತ್ಸವಕ್ಕೆ ಬರೋ ಭಕ್ತರನ್ನ ಆಕರ್ಷಿಸೋ ಉದ್ದೇಶದಿಂದ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನ ಆಕರ್ಷಿಸುತ್ತಿದೆ. ಪ್ರತಿ ನಿತ್ಯ ರಾತ್ರಿ ಬಲಿ ಪೂಜೆ ನಡೆಯೋ ಮೂಲಕ ಮಂಜುನಾಥ ಸ್ವಾಮಿಗೆ ರಾತ್ರಿಯ ವಿಶೇಷ ಪೂಜೆ ನೆರವೇರಿಸಲಾಗುತ್ತೆ. ಹೀಗಾಗಿ ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ಜನ ಸಂದಣಿ ಇರೋ ಕಾರಣದಿಂದ ನಿರಂತರ ಅನ್ನ ಸಂತರ್ಪಣೆಯೂ ನಡೆಯುತ್ತಿದೆ.
ಇನ್ನು ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯೋ ಭಕ್ತರು ಇಲ್ಲಿನ ವೈಭವನ್ನ ಕಣ್ತುಂಬಿ ಕೊಳ್ಳೋ ಮೂಲಕ ಖುಷಿ ಪಡ್ತಿದ್ದಾರೆ. ದೂರದ ಊರಿನಿಂದಲೂ ಸಾವಿರಾರು ಜನರು ಕ್ಷೇತ್ರಕ್ಕೆ ಆಗಮಿಸುತ್ತಾ ಇದ್ದು, ಪೊಲೀಸರ ಜೊತೆ ಕ್ಷೇತ್ರದ ಸಿಬ್ಬಂದಿಯೂ ಭದ್ರತೆ ಕೆಲಸದಲ್ಲಿ ತೊಡಗಿದ್ದಾರೆ. ಈ ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆ ಭಕ್ತರಲ್ಲಿ ಖುಷಿ ತಂದಿದ್ದು, ಇದರಿಂದಾಗಿಯೇ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚ ತೊಡಗಿದೆ.