ನೇಸರ ಸೆ.11: ದೇಹದ ಪ್ರಮುಖ ಅಂಗವಾದ ಮುಖದ ಆರೋಗ್ಯವು ನಮ್ಮ ಹಲ್ಲುಗಳ ಅವಲಂಬಿತವಾಗಿದೆ. ನವೀನ ಜೀವನ ಶೈಲಿ ಹಾಗು ಆಧುನಿಕ ಆಹಾರ ಪದ್ದತಿಗಳಿಂದಾಗಿ ಹಾಳಾಗುತ್ತಿರುವುದು ಒಪ್ಪಿಕೊಳ್ಳಬೇಕಾದ ವಿಷಯವಾಗಿದೆ. ಅದ್ದರಿಂದ ಹಲ್ಲು ಮತ್ತು ಬಾಯಿಯ ಸಂರಕ್ಷಣೆಗಾಗಿ ಹಲ್ಲು ತಪಾಸಣೆ ಮಾಡಿಕೊಳ್ಳುವುದು ಅವಶ್ಯಕ. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪ್ರಯೋಜನಕಾರಿ ಎಂದು ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ಹೇಳಿದರು.
ಅವರು ಜೇಸಿಐ ಜೋಡುಮಾರ್ಗದ ವತಿಯಿಂದ ಜೇಸಿ ಸಪ್ತಾಹ 2022ರ ಅಂಗವಾಗಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಯೋಗದೊಂದಿಗೆ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಜೇಸಿ ಜೋಡುಮಾರ್ಗ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್ ವಹಿಸಿದ್ದರು. ದಂತ ವೈದ್ಯರಾದ ಡಾ.ನವ್ಯ ಜಯದೀಪ್ ವಿದ್ಯಾರ್ಥಿಗಳ ದಂತ ಪರೀಕ್ಷೆ ಮಾಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ಪದಾಧಿಕಾರಿಗಳಾದ ದೀಪ್ತಿ ಶ್ರೀನಿಧಿ ಭಟ್, ಅಶ್ವಿನಿ ಬಿ.ಎಸ್., ರೋಟರಿ ಸದಸ್ಯರು, ಶಾಲಾ ಶಿಕ್ಷಕ ವೃಂದವರು ಭಾಗವಹಿಸಿದ್ದರು. ಜೆಸಿಐ ಸಪ್ತಾಹ ನಿರ್ದೇಶಕರಾದ ಗಾಯತ್ರಿ ಲೋಕೇಶ್ ವಂದಿಸಿದರು.