ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಬ್ ಹಾಗೂ ಸ್ಕೌಟ್ಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ನೇಸರ ಸೆ.11: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಪುತ್ತೂರು ಸ್ಥಳೀಯ ಸಂಸ್ಥೆ ಆಯೋಜಸಿದ ಸ್ಥಳೀಯ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಬ್ ರಿತ್ವಿಕ್ ಆರ್ ರೈ(ರಘುರಾಮ ರೈ ಮತ್ತು ವಿದ್ಯಾ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸ್ಕೌಟ್ಸ್ ಗಳಾದ ಶ್ರೀನಿಧಿ(ಶ್ರೀ ಸುರೇಶ್ ಮತ್ತು ಭಾರತಿ.ಎಸ್.ಎ ದಂಪತಿ ಪುತ್ರ), ಅನೂಪ್.ಟಿ(ಶ್ರೀ ಶಿವಾನಂದಪ್ಪ.ಟಿ ಹಾಗೂ ಸುಮಂಗಲಾ.ಕೆ ದಂಪತಿ ಪುತ್ರ), ಪ್ರಣವ್ ಕಾಡೂರು(ಶ್ರೀ ರಾಜಾರಾಮ್ ಕಡೂರು ಮತ್ತು ಶ್ವೇತಾ ಕಾಡೂರು ದಂಪತಿ ಪುತ್ರ), ಪ್ರಣೀಲ್ ರೈ.ಎಂ(ಪ್ರಕಾಶ್ ಹಾಗೂ ಸತ್ಯಲತಾ ದಂಪತಿ ಪುತ್ರ) , ಅಭಿಜಿತ್.ಕೆ.ಆರ್ (ಶ್ರೀ ರಮೇಶ್ ಕೈಂತಾಜೆ ಮತ್ತು ಗಾಯತ್ರಿದೇವಿ ದಂಪತಿ ಪುತ್ರ) , ಅದ್ವಿತ್ ಶರ್ಮಾ(ಶ್ರೀ ಸುಧೀರ್.ಬಿ.ಎಸ್ ಮತ್ತು ಲತಾ ಶಾಂಭವಿ ದಂಪತಿ ಪುತ್ರ), ಪ್ರಧಾನ್.ಕೆ.ಚಂದ್ರ (ಶ್ರೀ ಚಂದ್ರ.ಕೆ ಹಾಗೂ ಶಶಿಕಲಾ.ಎಂ ದಂಪತಿ ಪುತ್ರ) ,ಧನುಷ್ ರಾಮ್.ಎಂ(ಶ್ರೀ ದಿನೇಶ್ ಪ್ರಸನ್ನ ಹಾಗೂ ಉಮಾ ಪ್ರಸನ್ನ ದಂಪತಿ ಪುತ್ರ) ಇವರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ಗೈಡ್ಸ್ ಗಳಾದ ಶ್ರೇಯಾ ರಾವ್(ಶ್ರೀ ಅನಂತಕೃಷ್ಣ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ), ಸಾನ್ವಿ ರೈ(ಶ್ರೀ ಸುದರ್ಶನ್ ರೈ ಮತ್ತು ಪ್ರೇಮಾ.ಎಸ್.ರೈ ದಂಪತಿ ಪುತ್ರಿ) ,ಆಶಿತಾ (ಶ್ರೀ ನಾರಾಯಣ ಮತ್ತು ಹೇಮಲತ ದಂಪತಿ ಪುತ್ರಿ) ,ಅಂಜನ ಶಾರದಾ (ಶ್ರೀ ಜಯರಾಮ .ಜೆ.ಬಿ ಮತ್ತು ಸರಸ್ವತಿ.ಬಿ ದಂಪತಿ ಪುತ್ರಿ),ಎ. ಪ್ರಜ್ಞಾ ಶೆಟ್ಟಿ (ಶ್ರೀ ಸುಭಾಶ್ಚಂದ್ರ ಶೆಟ್ಟಿ ಮತ್ತು ಮೈನಾ ಶೆಟ್ಟಿ ದಂಪತಿ ಪುತ್ರಿ), ಕ್ಷಮಾ.ವೈ(ಡಾ.ಮಹೇಶ್ ಕುಮಾರ್ ವೈ ಮತ್ತು ಮಾಲಾ ಮಹೇಶ್ ವೈ ದಂಪತಿ ಪುತ್ರಿ),ಆರ್.ಕೆ.ನಿರತ (ಶ್ರೀ ಬಿ.ಕೆ.ರಾಮಚಂದ್ರ ಹಾಗೂ ಎಚ್.ಎ.ಗೀತಾ ದಂಪತಿ ಪುತ್ರಿ), ವಂಶಿ.ಬಿ.ಕೆ(ಶ್ರೀ ಕಮಲಾಕ್ಷ.ಬಿ.ಎಸ್ ಮತ್ತು ಜಯಲತಾ ದಂಪತಿ ಪುತ್ರಿ) ಇವರ ತಂಡ ತೃತೀಯ ಸ್ಥಾನ ಪಡೆದಿದೆ ಎಂದು ಶಾಲಾ ಮುಖ್ಯ ಗುರುಗಳಾದ ಸತೀಶ್ ಕುಮಾರ್ ರೈ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!