ಕೊಕ್ಕಡ: ಪಟ್ಟೂರು ಸಮೀಪದ ಗುರುವ ಮುಗೇರ (66) ನ.14 ರಂದು ಸಾವನ್ನಪ್ಪಿದ್ದಾರೆ. ಇದು ಸಂಶಯಾಸ್ಪದ ಸಾವು ಎಂದು ಮೃತರ ಅಣ್ಣನ ಮಗ ಕಿರಣ್ ಎಂಬುವವರು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರ
ಗುರುವ ಮುಗೇರರಿಗೆ ಈರ್ವರು ಪುತ್ರರಿದ್ದು ಹಿರಿಯ ಪುತ್ರ ದಶಕಗಳ ಹಿಂದೆ ಇಲಿ ಜ್ವರದಿಂದ ಸಾವನ್ನಪ್ಪಿದ್ದು ಹಿರಿಯ ಸೊಸೆ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರು. ಕಿರಿಯ ಪುತ್ರ ಕಳೆದ ವಾರ ಹಾವು ಕಚ್ಚಿ ಮೃತರಾಗಿದ್ದು, ಗುರುವ ಮುಗೇರರ ಪತ್ನಿಯೂ ಸಾವನ್ನಪ್ಪಿದ್ದರು. ಮನೆಯಲ್ಲಿ ಗುರುವ ಹಾಗೂ ಪುತ್ರಿ ಜಾನಕಿ ವಾಸಿಸುತ್ತಿದ್ದರು. ಸೋಮವಾರ ಬೆಳಗ್ಗೆ ದೊಡ್ಡಪ್ಪನ ಮಗ ಕಿರಣರಿಗೆ ಮಗಳು ಜಾನಕಿ ತಂದೆಯ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಆಗಮಿಸಿದ ಕಿರಣ್, ಗುರುವ ಮುಗೇರರ ಮನೆಗೆ ಬಂದಾಗ ಅವರ ತಲೆಯಲ್ಲಿ ರಕ್ತ ಸುರಿಯುತ್ತಿತ್ತು ಹಾಗೂ ಗುರುವ ಮುಗೇರ ಮೃತ ಪಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಿರಣ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸುವಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಕಳಿಸಲಾಯಿತು.