ಕಣಿಯೂರು ನೂತನ ಸಿ ಎಸ್ ಸಿ ಕೇಂದ್ರ ಉದ್ಘಾಟನೆ

ಶೇರ್ ಮಾಡಿ

ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಣಿಯೂರು ಕಛೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಪ್ರಾಯೋಜಕತ್ವದ ನೂತನ ಸಿ ಎಸ್ ಸಿ ಕೇಂದ್ರ ದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ರೈತಬಂದು ಆಹಾರೋಧ್ಯಮ ಪ್ರೈವೇಟ್ ಲಿಮಿಟೆಡ್ ಇದರ ಮಾಲಕರಾದ ಶಿವಶಂಕರ ನಾಯಕ್ ಮಾರುತಿಪುರ ಇವರು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮ ಮಟ್ಟದಲ್ಲಿಯೇ ಈ ಯೋಜನೆಯನ್ನು ಹಮ್ಮಿಕೊಂಡಿರುವುದರಿಂದ ಊರಿನ ಎಲ್ಲಾ ಜನರಿಗೂ ಹಿಂಜರಿಕೆಯಿಲ್ಲದೆ ಸಮಸ್ಯೆಯ ಬಗ್ಗೆ ವ್ಯವಹರಿಸಲು ಸಾಧ್ಯ, ಇದೊಂದು ಉತ್ತಮ ಕಾರ್ಯಕ್ರಮ, ಎಲ್ಲಾ ಗ್ರಾಮಸ್ತರಿಗೂ ಇಲ್ಲಿ ಉತ್ತಮ ಸೇವೆ ದೊರಕಲಿ ಎಂದು ಶುಭ ಹಾರೈಸಿದರು.

ಗುರುವಾಯನಕೆರೆ ಯೋಜನಾ ಕಛೇರಿಯ ಯೋಜನಾಧಿಕಾರಿ ಯಶವಂತ್ ಇವರು ಮಾತನಾಡಿ ಪ್ರತೀ ಗ್ರಾಮಗಳಿಗೆ ಸುಮಾರು 1.5 ಲಕ್ಷ ವೆಚ್ಚದಲ್ಲಿ ಈ ಸಿ.ಎಸ್.ಸಿ ಕೇಂದ್ರ ಸ್ಥಾಪನೆ ಮಾಡಿದ್ದು ಸುಮಾರು 28 ರೀತಿಯ ವಿವಿದ ಸೇವೆಗಳನ್ನು ಈ ಕೆಂದ್ರದಲ್ಲಿ ನಿರ್ವಹಿಸಲಾಗುತ್ತದೆ, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ನವಜೀವನ ಗ್ರಾಮ ಸಮಿತಿ ಅದ್ಯಕ್ಷರಾದ ಪ್ರಪುಲ್ಲಚಂದ್ರ ಅಡ್ಯಂತ್ತಾಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಶ್ರೀಮತಿ ಶಾರದಾ ಆರ್ ರೈ ಹಾಗೂ ಸದಸ್ಯರಾದ ರಾಜೀವ ರೈ ಮೊಗೆರೋಡಿ, ಕಣಿಯೂರು ಒಕ್ಕೂಟಗಳ ಮಾಜಿ ವಲಯಾಧ್ಯಕ್ಷರಾದ ಅಬ್ಬಾಸ್ ಬಟ್ಲಡ್ಕ ನೂತನ ವಿ ಎಲ್ ಇ ದೀಕ್ಷಾ ಇವರಿಗೆ ಲ್ಯಾಪ್ ಟಾಪ್ ಹಸ್ತಾಂತರಿಸಿ ಶುಭಹಾರೈಸಿದರು.
ಒಕ್ಕೂಟದ ಅಧ್ಯಕ್ಷರಾದ ತಿಲಕ್ ಕುಡುವಂತಿ, ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ, ಕಣಿಯೂರು ವಲಯದ ಸೇವಾಪ್ರತಿನಿದಿಗಳಾದ ಪ್ರೇಮ ಹಾಗೂ ತಾರಾ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿದಿ ಪ್ರೇಮ ಧನ್ಯವಾದವಿತ್ತರು.

Leave a Reply

error: Content is protected !!