ನೇಸರ ಡಿ.14: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಅಕ್ಷಯ ಮಹಾಸಂಘ ಶಿರಾಡಿ ಇದರ ಆಶ್ರಯದಲ್ಲಿ ಸೈಂಟ್ ಸೆಬಾಸ್ಟಿನ್ ಚರ್ಚ್ ಸಭಾಭವನದಲ್ಲಿ ಡಿ.13ರಂದು ಅಂತರಾಷ್ಟ್ರೀಯ ಮಾನವ ಹಕ್ಕು ದಿನಾಚರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಬಿಂದು ಸಣ್ಣ ವಹಿಸಿದ್ದರು.ವಂದನೀಯ ಫಾ। ಆದರ್ಶ್ ಪುದಿಯೇಡತ್ ಧರ್ಮಗುರುಗಳು ಸೈಂಟ್ ಮೇರಿಸ್ ಚರ್ಚ್ ನೆಟ್ಟಣ ಇವರು ಮಾನವ ಹಕ್ಕುಗಳ ದಿನಾಚರಣೆಯ ಧ್ಯೇಯವಾಕ್ಯ ಅನಾವರಣ ಗೊಳಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾಕ್ಟರ್ ಚಂದ್ರಶೇಖರ್ ವೈದ್ಯಾಧಿಕಾರಿ,ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರಾಡಿ ಇವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿ ಕೋವಿಡ್ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವ ಸ್ವಯಂಸೇವಕರಿಗೆ ರಕ್ಷಣಾ ಕಿಟ್ಟನ್ನು ವಿತರಿಸಿದರು. ವಂದನೀಯ ಫಾದರ್ ಸನೀಶ್ ಪುದುಪರಂಬಿಲ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಾಮಾಜಿಕ ಹೋರಾಟಗಾರರಾದ ಶ್ರೀ ಸಂಜೀವ್ ಕಬಕ ಇವರು ಮಾನವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ.ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಮಹಾಸಂಘ, ಶಿರಾಡಿ ಇದರ ಕಾರ್ಯದರ್ಶಿ ಶ್ರೀಮತಿ ದೀಪ್ತಿ ಸ್ವಾಗತಿಸಿದರು. ಆಲ್ಫೋನ್ಸಾ ಸಂಘ ಶಿರಾಡಿ ಇದರ ಸದಸ್ಯೆ ಶ್ರೀಮತಿ ಅನ್ನಮ್ಮ ಧನ್ಯವಾದವಿತ್ತರು. ಕುಮಾರಿ ರೇಚಲ್ ಪ್ರಾರ್ಥನೆ ಹಾಡಿದರು.ಕಾರ್ಯಕ್ರಮದಲ್ಲಿ 60 ಮಂದಿ ಉಪಸ್ಥಿತರಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು