ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ ಹಸ್ತಾಂತರ

ಶೇರ್ ಮಾಡಿ

ನೇಸರ ಡಿ 18:ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 2020-21 ನೇ ಸಾಲಿನ ಲಾಭಾಂಶ ವಿಂಗಡನೆ ಮಾಡಲಾಗಿ 1,57,551. 00 ಚೆಕ್ಕನ್ನು ಸಹಕಾರಿ ಶಿಕ್ಷಣ ನಿಧಿಗೆ, ಸಂಘದ ಅಧ್ಯಕ್ಷ ಶಶಾಂಕ ಗೋಖಲೆ ಮಾರ್ಗದಮನೆ ಯವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನ ಸಿ.ಇ.ಒ ಪುರುಷೋತ್ತಮರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶಿವಪ್ರಸಾದ್ ಪುತ್ತಿಲ, ಜಯಚಂದ್ರ ರೈ, ಕುಶ ಕುಮಾರ್, ಮುಖ್ಯಕಾರ್ಯನಿರ್ವಾಹಕ ಸೋಮಸುಂದರ ಶೆಟ್ಟಿ,ಕುಟ್ರುಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕಿರಣ್ ಗೋಗಟೆ ಉಪಸ್ಥಿತರಿದ್ದರು.

Leave a Reply

error: Content is protected !!