ಗೊಳಿತೊಟ್ಟು: ಮಾನ್ಯ ಕರ್ನಾಟಕ ರಾಜ್ಯ ಘನ ಸರ್ಕಾರದ ಆದೇಶದ ಅನ್ವಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಬಗೆಗಿನ ಮಾಹಿತಿ, ಸುರಕ್ಷತೆಯ ಅರಿವು, ವಿವಿಧ ಯೋಜನೆ ಗಳ ಮಾಹಿತಿ ಮತ್ತು ಗ್ರಾಹಕರ ವಿದ್ಯುತ್ ನ ಸಮಸ್ಯೆಗಳ ಆಲಿಸುವ ಪ್ರತಿ ತಿಂಗಳ 3ನೇ ಶನಿವಾರ ಹಮ್ಮಿಕೊಳ್ಳುವ “ವಿದ್ಯುತ್ ಅದಾಲತ್ ” ಕಾರ್ಯಕ್ರಮ ಕ್ರಮವನ್ನು ಈ ತಿಂಗಳು ಕೊಣಾಲು ಗ್ರಾಮ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರಂತೆ ಜ.21.01.2023ರಂದು ಶನಿವಾರ ಬೆಳಿಗ್ಗೆ 10.00 ಗಂಟೆಗೆ ಗೊಳಿತೊಟ್ಟು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಆಯೋಜಿಸಿದ್ದು ಗ್ರಾಹಕರು ಹೆಚ್ಚಿನ ಸದುಪಯೋಗ ಪಡೆದುಕೊಳ್ಳಲು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದರು.