ಆಲಂತಾಯ: ಅಯ್ಯೊಧ್ಯೆಯ ಶ್ರೀರಾಮ ಜನ್ಮಭೂಮಿಯ ಹೋರಾಟ ಪ್ರತೀ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಕಡಬ ತಾಲೂಕಿನ ಆಲಂತಾಯದಲ್ಲಿ ಪ್ರಾರಂಭಗೊಂಡ ಶ್ರೀರಾಮ ಭಜನಾ ಮಂದಿರವು ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು.
ಆದರೆ ಕಳೆದ ಕೆಲವು ವರ್ಷಗಳಿಂದ ಯಾವುದೇ ಚಟುವಟಿಕೆಗಳಿಲ್ಲದೇ ನಿರ್ಜೀವ ಸ್ಥಿತಿಗೆ ತಲುಪಿತ್ತು. ಇದನ್ನು ಗಮನಿಸಿದ ಇಲ್ಲಿನ ಮಕ್ಕಳು ಭಜನಾ ಮಂದಿರವನ್ನು ಈ ಭಾಗದ ಮಕ್ಕಳು ಸೇರಿ ಸ್ವಚ್ಚಗೊಳಿಸಿ, ಭಜನೆಯನ್ನು ಪ್ರಾರಂಭ ಮಾಡಿ ಎಲ್ಲರಿಗೂ ಪ್ರೇರಣೆಯಾದರು. ಭಜನೆಗೆ ಊರಿನ ಹಿರಿಯರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಚರಣ್ ಮುಂಡಾವು, ಉಪೇಕ್ಷ್ ಪಾಲೇರಿ, ಶ್ರವಣ್ ಪಾಲೇರಿ, ಧನುಷ್ ಪಾಲೇರಿ, ತೇಜಸ್ ಪಾಲೇರಿ, ಮೋಕ್ಷಿತ್ ಪಾಲೇರಿ, ಪ್ರೀತಮ್ ಪಾಲೇರಿ, ಕೀರ್ತೆಶ್ ಪಾಲೇರಿ, ರೋಹನ್ ಪಾಲೇರಿ, ಹರ್ಷವರ್ಧನ ಪಾಲೇರಿ, ಆದಿತ್ಯ ಪಾಲೇರಿ, ಅದ್ವಿಕ್ ಪಾಲೇರಿ, ತನ್ವಿ ಪಾಲೇರಿ, ಸಮನ್ವಿ ಪಾಲೇರಿ, ಕೃತಿ ಪಾಲೇರಿ, ಆರಾಧ್ಯ ಚಿಲುಮೆ, ಆಧ್ಯಾ ಚಿಲುಮೆ, ಶ್ರೀಶ ಚಿಲುಮೆ, ಶ್ರದ್ಧಾ ಚಿಲುಮೆ, ಶ್ರಾವ್ಯ ಚಿಲುಮೆ, ಹಂಸಿ ಚಿಲುಮೆ, ಆಶ್ರಯ್ ಚಿಲುಮೆ, ಶ್ರೀಶ್ಲೇಷ ಚಿಲುಮೆ, ಆಶೀತಾ ಚಿಲುಮೆ, ತ್ರೀಶಾ ಚಿಲುಮೆ, ಅನ್ವಿತಾ ನಕ್ಕುರಡ್ಕ, ಅಂಕಿತಾ ನಕ್ಕುರಡ್ಕ ಮುಂತಾದವರು ಭಾಗವಹಿಸಿದ್ದರು. ಅಲ್ಲದೇ ವಾಣಿ ಶೆಟ್ಟಿ ಪಾಲೇರಿ, ಶ್ರೀಲತಾ ಪಾಲೇರಿ, ಅನಿತಾ ಚಿಲುಮೆ, ಜನಾರ್ದನ ಪಾಲೇರಿ, ಭರತೇಶ್ ಅಲಂಗಪ್ಪೆ, ಕೀರ್ತನ್ ಸಣ್ಣಂಪಾಡಿ, ಸುಭಾಷ್ ಪುರ, ಜಯಂತ ಅಂಬರ್ಜೆ, ಅಶೋಕ್ ಸಿ.ಬಿ. ಪಾಲೇರಿ ಮುಂತಾದವರು ಸಹಕಾರ ನೀಡಿದರು.
ಮುಂದೆ ಪ್ರತೀ ಭಾನುವಾರ ಸಂಜೆ 5:30ಕ್ಕೆ ಭಜನೆ ನಡೆಸುವ ಬಗ್ಗೆ ತಿಳಿಸಿರುತ್ತಾರೆ.