ಕೋಣಾಲು ಉಚಿತ ನೇತ್ರ ಚಿಕಿತ್ಸಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ

ಶೇರ್ ಮಾಡಿ

ನೇಸರ ಡಿ22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗೋಳಿತೊಟ್ಟು ವಲಯ ಇದರ ಆಶ್ರಯದಲ್ಲಿ
ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಪ್ರಾರ್ಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಸಂಚಾರಿ ಚಿಕಿತ್ಸಾ ಘಟಕ ಮಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ 21-12-2021 ಮಂಗಳವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಣಾಲು ನಲ್ಲಿ ಉಚಿತ ನೇತ್ರ ಚಿಕಿತ್ಸಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ,ಉಚಿತ ಕನ್ನಡಕ ವಿತರಣೆ ನಡೆಯಿತು.


ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ರವರು ಶಿಬಿರವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ರವರು ವಹಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಇದು ನನ್ನ ಸಂಘಟನೆಯ 40ನೇ ಶಿಬಿರ. ಈ ಮೂಲಕ ನಾವು ಡಾ.ಶಾಂತರಾಜ್ ರವರ ಮತ್ತು ಶ್ರೀಮತಿ ಗೌರಿ ಪೈ ಅವರ ನೇತೃತ್ವದಲ್ಲಿ ಸಾವಿರಾರು ಜನರಿಗೆ ಬೆಳಕು ನೀಡಿದ್ದೇವೆ. ಈವರೆಗೆ 40 ಸಾವಿರ ಜನ ಇದರ ಅನುಕೂಲ ಪಡೆದಿದ್ದಾರೆ ಇದು ನನ್ನ ಸೌಭಾಗ್ಯ ಎಂದರು. ವೇದಿಕೆಯಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ನ ಸದಾಶಿವ ಪೈ, ನೇತ್ರ ತಜ್ಞೆ ಡಾ.ಲಕ್ಷ್ಮಿ,ಕೃಷ್ಣಪ್ಪ ಕಾರ್ಮಿಕ ಇಲಾಖೆ ಭಾರತ ಸರಕಾರ ಸರಕಾರ, ಉದ್ಯಮಿ ಕೆ.ಪಿ ತೋಮಸ್, ಸೀತಾರಾಮ ಗೌಡ ಕಾನಮನೆ, ಶ್ರೀಮತಿ ಗಿರಿಜಾ, ಮಹಮ್ಮದ್ ರಫೀಕ್.ಕೆ.ಇ, ಶ್ರೀಮತಿ ಅನಿತಾ, ನೋಣಯ್ಯ ಪೂಜಾರಿ ಅಂಬರ್ಜೆ, ಮೊದಲಾದವರು ಉಪಸ್ಥಿತರಿದ್ದರು.

ಶಿಬಿರದ ಸಂಯೋಜಕ ನೇಮಿರಾಜ ಕಲಾಯಿ ವಂದಿಸಿದರು. ಶಿಕ್ಷಕ ರಾಮಣ್ಣಗೌಡ ನಿರೂಪಿಸಿದರು. ಶಿಬಿರದಲ್ಲಿ 160 ಜನ ಭಾಗವಹಿಸಿ ಕಣ್ಣಿನ ತಪಾಸಣೆ ನಡೆಸಿಕೊಂಡರು, ಸುಮಾರು 120 ಕನ್ನಡಕಗಳನ್ನು ಆನಂದಾಶ್ರಮ ಸೇವಾ ಟ್ರಸ್ಟ್ ನಿಂದ ಉಚಿತವಾಗಿ ವಿತರಿಸಲಾಯಿತು, ಹತ್ತು ಜನರನ್ನು ಶಸ್ತ್ರಚಿಕಿತ್ಸೆಗೆ ಕಳಿಸಲಾಯಿತು.

ಜಾಹೀರಾತು

Leave a Reply

error: Content is protected !!