ಕೊಣಾಲು-ಆರ್ಲ ಹಾ.ಉ.ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಶೇರ್ ಮಾಡಿ

2,39,240 ಲಕ್ಷ ರೂ.ನಿವ್ವಳ ಲಾಭ. ಶೇ.8 ಡಿವಿಡೆಂಡ್

ನೇಸರ ಡಿ22: ನೆಲ್ಯಾಡಿ-ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಡಿ.21ರಂದು ಸಂಘದದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ವಹಿಸಿ ಮಾತನಾಡಿ, ಸಂಘ ಆರಂಭಗೊಂಡು 6 ವರ್ಷ ಕಳೆದಿದ್ದು ಪ್ರತಿ ವರ್ಷವೂ ಲಾಭದಲ್ಲಿ ಮುಂದುವರಿದಿದೆ. ವರದಿ ವರ್ಷದಲ್ಲಿ 38,30,50 ರೂ.ಮೌಲ್ಯದ ಹಾಲು ಖರೀದಿಸಲಾಗಿದೆ. ಇದರಲ್ಲಿ 37,75,989 ರೂ.ಮೌಲ್ಯದ ಹಾಲು ಡೈರಿಗೆ ಹಾಗೂ 4,89,202 ರೂ.ಮೌಲ್ಯದ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಸಂಘವು 2,39,240 ರೂ.ನಿವ್ವಳ ಲಾಭಗಳಿಸಿದೆ ಎಂದರು. ಒಕ್ಕೂಟದ ಸಹಕಾರದಿಂದ ಪ್ರತಿ 6 ತಿಂಗಳಿಗೊಮ್ಮೆ ಕಾಲುಬಾಯಿ ಜ್ವರ ನಿವಾರಣಾ ಲಸಿಕೆ ನೀಡಲಾಗುತ್ತಿದೆ. ಜಾನುವಾರುಗಳ ಕೃತಕ ಗರ್ಭಧಾರಣಾ ಸೌಲಭ್ಯವಿದೆ. ಮುಂದಿನ ವರ್ಷದಲ್ಲಿ ಸಂಘವು ಸ್ವಂತ ಕಟ್ಟಡದಲ್ಲಿ ಆರಂಭಗೊಳ್ಳಲು ಸಂಘದ ಸದಸ್ಯರೆಲ್ಲರೂ ಸಹಕರಿಸಬೇಕೆಂದು ಹೇಳಿದರು.

ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾರವರು ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸದಸ್ಯರು ಗುಣಮಟ್ಟದ ಹಾಗೂ ಶುದ್ಧ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಕಾರಣರಾಗಬೇಕೆಂದು ಹೇಳಿದರು. ನೆಲ್ಯಾಡಿಯ ಹೋಮಿಯೋಪಥಿ ವೈದ್ಯ ಡಾ.ಅನೀಸ್‌ರವರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಗಾಯತ್ರಿದೇವಿ,ನಿರ್ದೇಶಕರುಗಳಾದ ಬೇಬಿ, ನೈಜಿ, ವಲ್ಸಮ್ಮಜೋಯಿ, ಲೀಲಾವತಿ, ವಾರಿಜಾಕ್ಷಿ, ಶಾಂತಿ ಮರಿಯ ಮೊಂತೊರೋ, ಲಿಸ್ಸಿ, ಸುಹಾಸಿನಿ, ಝುಬೈದಾ, ಶೀಲಾ ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಲೈನಾಜೋಬಿನ್‌ರವರು ಸಂಘದ ವರದಿ, ಜಮಾಖರ್ಚಿನ ವಿವರ ಮಂಡಿಸಿದರು. ಗಾಯತ್ರಿದೇವಿ ಸ್ವಾಗತಿಸಿ, ವಾರಿಜಾಕ್ಷಿ ವಂದಿಸಿದರು. ಹಾಲು ಪರೀಕ್ಷಕಿ ಪ್ರಜಲಾಬಾಬು, ಕೃತಕ ಗರ್ಭಧಾರಣಾ ಕಾರ್ಯಕರ್ತೆ ಜಾನಕಿ ಸಹಕರಿಸಿದರು.

ಸಂಘಕ್ಕೆ 2020-21ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರಾದ ಶಾಂತಿಮರಿಯಾ ಕೊಣಾಲು(ಪ್ರಥಮ), ಲಿಸ್ಸಿ ಕುರಿಯಚ್ಚನ್(ದ್ವಿತೀಯ)ಹಾಗೂ ಜೋಲಿಜೇಕಬ್(ತೃತೀಯ)ರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

Leave a Reply

error: Content is protected !!