ಪಟ್ಟೂರು: ಪಟ್ರಮೆ ಗ್ರಾಮವನ್ನು ಗ್ರಾಮ ವಿಕಾಸದ ಅಡಿಯಲ್ಲಿ ಚಟುವಟಿಕಾ ಗ್ರಾಮವಾಗಿ ಆಯ್ಕೆ ಮಾಡಿರುವ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಕಲ್ಲಾಪು ಮನೆ ಅಂಬೋಡಿ ಎನ್ನುವವರ ಮನೆಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿತ್ತು.
ಅಂಬೋಡಿ ಯವರ ಮೂರು ಮಕ್ಕಳು ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ನಲ್ಲಿ ಓದುತ್ತಿದ್ದು. ಅವರ ಶೈಕ್ಷಣಿಕ ವಿಚಾರ ಕುರಿತು ಮಾಹಿತಿ ಪಡೆಯಲು ಮನೆ ಭೇಟಿ ಮಾಡಿದಾಗ ಅವರ ಮನೆಯಲ್ಲಿ ಶೌಚಾಲಯ ಇಲ್ಲದಿರುವುದು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಶಿಕ್ಷಕರ ಗಮನಕ್ಕೆ ಬಂದಿದ್ದು. ಪಟ್ರಮೆ ಗ್ರಾಮ ಪಂಚಾಯತ್ ಹಲವು ಬಾರಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನ ನೀಡುವುದಾಗಿ ತಿಳಿಸಿದರೂ ಮನೆಯವರು ಸೂಕ್ತ ಆಸಕ್ತಿ ಪ್ರತಿಕ್ರಿಯೆ ನೀಡದಿರುವುದು ಗಮನಕ್ಕೆ ಬಂದಿರುತ್ತದೆ.
ಗ್ರಾಮದ ಹಲವರು ಅನೇಕ ಬಾರಿ ಶೌಚಾಲಯ ನಿರ್ಮಿಸುವಂತೆ ಮನವೊಲಿಸಿದರೂ ಶೌಚಾಲಯ ನಿರ್ಮಾಣದ ಕಾರ್ಯ ನಡೆದಿರಲಿಲ್ಲ. ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಸುತ್ತ ಮುತ್ತಲಿನ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಭಾರತೀಯ ಮಾದರಿಯ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುವುದರೊಂದಿಗೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಎಂಬ ಗ್ರಾಮವನ್ನು ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಗ್ರಾಮ ವಿಕಾಸ ಕಾರ್ಯದ ಅಡಿಯಲ್ಲಿ ಚಟುವಟಿಕೆ ನಡೆಸುವ ಕಾರ್ಯ ಮಾಡುತ್ತಿದೆ.
ಈ ಬಗ್ಗೆ ಶಾಲಾ ಸಂಚಾಲಕರಾದ ಪ್ರಶಾಂತ್ ಶೆಟ್ಟಿ ದೇರಾಜೆ, ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಗ್ರಾಮ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಆದ ರಾಜೇಶ್ ರೈ ಪರಾರ್ತಿಮಾರು ಗ್ರಾಮ ವಿಕಾಸ ಸಮಿತಿ ಸದಸ್ಯೆ ಶ್ರೀಮತಿ ಸುಗಂಧಿ ಗ್ರಾಮ ವಿಕಾಸ ಕುರಿತು ಶಾಲೆಯಿಂದ ನಿಯೋಜಿತ ಶಿಕ್ಷಕಿ ಶ್ರೀಮತಿ ಸ್ವಾತಿ ಕೆ.ವಿ. ಅಂಬೋಡಿಯವರ ಮನೆಗೆ ತೆರಳಿ ಶೌಚಾಲಯದ ಮಹತ್ವದ ಕುರಿತು ಅರಿವು ಮೂಡಿಸಿ. ಮನವೊಲಿಸಿ, ಶೌಚಾಲಯ ನಿರ್ಮಾಣ ಮಾಡಲು ಸ್ಥಳ ಗುರುತಿಸಿ ನಿರ್ಮಾಣ ಕಾರ್ಯ ಕೈಗೊಂಡಿರುತ್ತದೆ. ಈ ಕುರಿತು ಪಂಚಾಯತ್ ಅನುದಾನ ಕೋರಿ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ರವರಿಗೆ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಗ್ರಾಮ ವಿಕಾಸ ಸಮಿತಿ ಮನವಿಯನ್ನು ನೀಡಿದ. ಪ್ರಯತ್ನದ ಫಲವಾಗಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿರುವುದನ್ನು ಪರಿಶೀಲಿಸಲು ಶ್ರೀರಾಮ ಪ್ರೌಢಶಾಲೆ ಪಟ್ಟೂರುನ ಗ್ರಾಮ ವಿಕಾಸ ತಂಡ ಭೇಟಿ ನೀಡಿ ಕೆಲಸವನ್ನು ಪರಿಶೀಲಿಸಿದರು.